ಕುಂಬಳೆ: ಪುತ್ತಿಗೆ ಪಂಚಾಯತಿಗೊಳಪಟ್ಟ ಬಾಡೂರುಪದವಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುವ ಅಸಹಾಯಕ ಕುಟುಂಬವೊಂದಕ್ಕೆ ಮಂಜೇಶ್ವರದ ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆ ತನ್ನ 65ನೇ ಯೋಜನೆಯಂತೆ ಆರ್ಥಿಕ ಸಹಾಯಧನ ಹಸ್ತಾಂತರಿಸಿತು.
ಮಧುಮೇಹ ಹಾಗೂ ವಾತ ಸಂಬಂಧಿ ರೋಗದಿಂದಾಗಿ ಅಸೌಖ್ಯಕ್ಕೊಳಗಾಗಿ ನಿಸ್ಸಾಯಕರಾದ ಕೂಲಿ ಕಾರ್ಮಿಕ ಚನಿಯಪ್ಪ ಎಂಬವರ ಕುಟುಂಬಕ್ಕೆ ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಅವರ ಸೂಚನೆಯಂತೆ ಸಂಸ್ಥೆ ನೇತೃತ್ವದಲ್ಲಿ ಸಂಗ್ರಹಿಸಿದ ಧನ ಸಹಾಯ ಹಾಗೂ ಆಹಾರ ಉತ್ಪನ್ನ ಸಾಮಾಗ್ರಿಗಳನ್ನು ಸಂಸ್ಥೆಯ ಪ್ರಮುಖರಾದ ನ್ಯಾಯವಾದಿ, ಸಮಾಜ ಸೇವಕ ನವೀನ್ ರಾಜ್ ಕೆ.ಜೆ.ಮಂಜೇಶ್ವರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೈಶ್ರೀರಾಮ್ ನ ಪದಾಧಿಕಾರಿಗಳಾದ ಪ್ರದೀಪ್ ಮೊರತ್ತಣೆ, ಪ್ರಶಾಂತ ಆಚಾರ್ಯ ಮಂಜೇಶ್ವರ,ಕಮಲಾಕ್ಷ ಬಾಡೂರು,ನಿತಿನ್ ಮಾನ್ಯ, ರೂಪೇಶ್ ಜೋಡುಕಲ್ಲು, ಕೃಷ್ಣ ಅಟ್ಟೆಗೋಳಿ, ನಿತೇಶ್ ಪಜಿಂಗಾರ್ ಹಾಗೂ ಊರ ಮುಂದಾಳುಗಳಾದ ಪದ್ಮನಾಭ ಆಚಾರ್ಯ ಬಾಡೂರು, ಬಿ.ಪಿ.ಶೇಣಿ, ರವಿ ಶೇಣಿ ಮೊದಲಾದವರು ಭಾಗವಹಿಸಿದ್ದರು.