ತಿರುವನಂತಪುರ: ಬೇಹುಗಾರಿಕೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ ಚಿತ್ರ ರಾಕೆಟ್ರಿ-ದಿ ನಂಬಿ ಎಫೆಕ್ಟ್ ಎಂಬ ಚಿತ್ರವನ್ನು ಕೇಂದ್ರ ವಿದೇಶಾಂಗ ಸಚಿವ ವಿ. ಮುರಳೀಧರನ್ ಅವರ ಮುಂದೆ ಪ್ರದರ್ಶಿಸಲಾಯಿತು. ಚಿತ್ರ ವೀಕ್ಷಿಸಿದ ನಂತರ ವಿ.ಮುರಳೀಧರನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಶ್ರಮಜೀವಿ ವಿಜ್ಞಾನಿಯನ್ನು ಸರ್ಕಾರ ಮತ್ತು ಪೋಲೀಸರು ಹೇಗೆ ದೇಶದ್ರೋಹಿಯಾಗಿ ಪರಿವರ್ತಿಸಿದರು ಎಂಬುದನ್ನು ಚಿತ್ರದಲ್ಲಿ ನಿಖರವಾಗಿ ಚಿತ್ರಿಸಲಾಗಿದೆ ಎಂದಿರುವರು.
ನಂಬಿ ನಾರಾಯಣನ್ ಅಧಿಕಾರಾರ್ಹದ ಲಾಲಸೆಗೆ ಬಲಿಯಾಗಿ ದೇಶದ್ರೋಹಿ ಎಂಬ ಹಣೆಪಟ್ಟಿ ಹೊತ್ತ ವಿಜ್ಞಾನಿ. ಎಡ ಮತ್ತು ಬಲ ಸರ್ಕಾರ ಇಲ್ಲದ ಪ್ರಕರಣಗಳನ್ನು ಇವರಮೇಲೆ ಹೇರಿ ತೀವ್ರ ಘಾಸಿಗೊಳಿಸಿತ್ತು. ಪದ್ಮಭೂಷಣ ನಂಬಿ ನಾರಾಯಣ ಅವರು ಅನುಭವಿಸಿದ ನೋವು ಕಾವ್ಯವಾಗಿ ನ್ಯಾಯ ಒದಗಿಸಿದ ಚಿತ್ರವಾಗಿದೆ ಎಂದು ವಿ. ಮುರಳೀಧರನ್ ತಿಳಿಸಿದ್ದಾರೆ.
ನಂಬಿ ನಾರಾಯಣನ್ ವಿರುದ್ಧ ಕಾಂಗ್ರೆಸ್ ನಾಯಕರ ಷಡ್ಯಂತ್ರವನ್ನು ಚಿತ್ರ ನೆನಪಿಸುತ್ತದೆ. ಇಸ್ರೋಗೆ ನಂಬಿ ನಾರಾಯಣನ್ ಅವರ ಕೊಡುಗೆಯನ್ನು ಸ್ಮರಿಸುತ್ತೇವೆ ಎಂದು ಅವರು ಹೇಳಿ ವಿ.ವಿ. ಮರಳೀಧರನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಂಬಿ ನಾರಾಯಣ್ ಅವರಿಗೆ ಸಲ್ಲಬೇಕಾದ ಮನ್ನಣೆ ನೀಡಿ ಗೌರವಿಸಿರುವ ನರೇಂದ್ರ ಮೋದಿ ಸರ್ಕಾರದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ವಿ. ಮುರಳೀಧರನ್ ಹೇಳಿದ್ದಾರೆ.