ಎರ್ನಾಕುಳಂ: ನಟಿ ಮೇಲಿನ ಹಲ್ಲೆ ಪ್ರಕರಣದ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯನ್ನು ಅಪರಾಧ ವಿಭಾಗ ಪೂರ್ಣಗೊಳಿಸಿದೆ. ಮುಂದಿನ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ದಿನಗಳು ಮಾತ್ರ ಬಾಕಿ ಇರುವಾಗ ತನಿಖಾ ತಂಡ ನಟ ಸಿದ್ದಿಕ್ ಸೇರಿದಂತೆ ಹಲವರ ಹೇಳಿಕೆಯನ್ನು ಹೊಸದಾಗಿ ದಾಖಲಿಸಿಕೊಂಡಿತ್ತು. ಮುಂದಿನ ತನಿಖೆ ಪೂರ್ಣಗೊಳಿಸಲು ಕ್ರೈಂ ಬ್ರಾಂಚ್‍ಗೆ ಹೈಕೋರ್ಟ್ ನೀಡಿದ್ದ ಗಡುವು ಇದೇ 15ಕ್ಕೆ ಕೊನೆಗೊಳ್ಳಲಿದೆ.
ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಪೂರ್ಣಗೊಳ್ಳಬೇಕು, ಸೈಬರ್ ಫೆÇೀರೆನ್ಸಿಕ್ ಪರೀಕ್ಷೆಯ ಫಲಿತಾಂಶಗಳು, ಧ್ವನಿ ಮಾದರಿಗಳು ಮತ್ತು ಇನ್ನೂ ಕೆಲವನ್ನು ಪಡೆಯಬೇಕಿದೆ ಎಂದು ತನಿಖಾ ತಂಡ ಸೂಚಿಸಿದ ನಂತರ ಹೈಕೋರ್ಟ್ ಮೇ 30 ರಿಂದ ಇನ್ನೂ ಒಂದೂವರೆ ತಿಂಗಳು ವಿಚಾರಣೆ ವಿಸ್ತರಿಸಿತ್ತು. ಈ ಹಿಂದೆ ಏಪ್ರಿಲ್ 15ರೊಳಗೆ ತನಿಖೆ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನಂತರ ಅದನ್ನು ಮೇ 30ರವರೆಗೆ ವಿಸ್ತರಿಸಲಾಯಿತು. ಆದರೆ ಡಿಜಿಟಲ್ ಸಾಕ್ಷ್ಯ ಸೇರಿದಂತೆ ಪರೀಕ್ಷೆ ಪೂರ್ಣಗೊಳ್ಳದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮತ್ತೆ ಒಂದೂವರೆ ತಿಂಗಳು ಕಾಲಾವಕಾಶ ನೀಡಲಾಯಿತು.
ನಟ ಸಿದ್ದಿಕ್, ದಿಲೀಪ್ ಸ್ನೇಹಿತ ಡಾ.ಹೈದರಾಲಿ ಮತ್ತು ಕಾವ್ಯಾ ಮಾಧವನ್ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ನಟಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ದಿಲೀಪ್ ಅವರ ಬಳಿ ಇವೆ ಎಂದು ನಿರ್ದೇಶಕ ಬಾಲಚಂದ್ರ ಕುಮಾರ್ ಬಹಿರಂಗಪಡಿಸಿದ ಹೇಳಿಕೆ ನಂತರ ಮುಂದಿನ ತನಿಖೆಗೆ ವೇದಿಕೆ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅಪರಾಧ ವಿಭಾಗವು ಮುಂದುವರಿಯಿತು. ಹೈಕೋರ್ಟ್‍ನ ಆದೇಶದ ಪ್ರಕಾರ, ವಿಚಾರಣಾ ನ್ಯಾಯಾಲಯವು ನಟಿ ಮೇಲಿನ ಹಲ್ಲೆ ಪ್ರಕರಣದ ಮುಂದಿನ ತನಿಖಾ ವರದಿಯನ್ನು ಇದೇ 16 ರಂದು ಸಲ್ಲಿಸುವಂತೆಯೂ ಸೂಚಿಸಿದೆ.