ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಸರಳವಾಗಿ ವಿವಾಹವಾದರು.
ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ವರಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್
0
ಜುಲೈ 07, 2022
Tags
ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಸರಳವಾಗಿ ವಿವಾಹವಾದರು.
ಮಾನ್ ಈ ಹಿಂದೆ ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು. ಅವರಿಗೆ 2015 ರಲ್ಲಿ ವಿಚ್ಛೇದನ ನೀಡಿದ್ದಾರೆ. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು.
ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ಗುರುಪ್ರೀತ್ ಕೌರ್ ಅವರನ್ನು ವಧುವಾಗಿ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.