ಬದಿಯಡ್ಕ: ಮುಂಡಿತ್ತಡ್ಕ ಶ್ರೀ ವಿಷ್ಣು ಕಲಾವೃಂದ ವಿಷ್ಣು ನಗರದ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸುನಿಲ್ ಮಾಸ್ತರ್ ವಿಷ್ಣು ನಗರ ಮುಂಡಿತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಜರಗಿತು.ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಪ್ರಾರ್ಥನೆ ಹಾಡುವ ಮೂಲಕ ಸಭೆಗೆ ಚಾಲನೆ ನೀಡಿದರು.
ಸಂಘದ ಹಿರಿಯ ಸದಸ್ಯರೂ ಮಾರ್ಗದರ್ಶಕರೂ ಆದ ಚಿದಾನಂದ ಆಳ್ವ ಮಂಜಕೊಟ್ಟಿಗೆ ಸಂಘದ ಬಗ್ಗೆ ಮಾತನಾಡಿದರು. ಸಂಘದ ಹಿರಿಯ ಸದಸ್ಯ ಸುಂದರ ಪುರುಷ ಮುಂಡಿತ್ತಡ್ಕ ಹಾಗೂ ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಪೂಜಾರಿ ಬೀರಿಕುಂಜ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಳಿಕ ಸಂಘದ ಹಿರಿಯ ಸದಸ್ಯ ರಾಮ್ ಕುಮಾರ್ ಮುಜುಕುಮೂಲೆ ಸಂಘ ನಡೆದು ಬಂದ ಹಾದಿಯನ್ನು ತಮ್ಮ ಅನುಭವದೊಂದಿಗೆ ಪ್ರಸ್ತುತ ಪಡಿಸಿದರು.
ಈ ಸಂದರ್ಭ 2021-22 ನೇ ಸಾಲಿನ ಲೆಕ್ಕಪತ್ರವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ಯಸ್ ಅವರು ಮಂಡಿಸಿದರು. ಲೆಕ್ಕಪತ್ರವನ್ನು ಸರ್ವಾನುಮತದಿಂದ ಸಭೆಯಲ್ಲಿ ಅಂಗೀಕರಿಸಲಾಯಿತು.
ನಂತರ 2022-23 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸುನಿಲ್ ಮಾಸ್ತರ್ ಮುಂಡಿತ್ತಡ್ಕ ಮರು ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಮಾಸ್ತರ್ ಮುಜುಕುಮೂಲೆ ಹಾಗೂ ಕೋಶಾಧಿಕಾರಿಯಾಗಿ ಪ್ರಶಾಂತ್ ಬೀರಿಕುಂಜ ಆಯ್ಕೆಗೊಂಡರು. ಕ್ರೀಡಾ ಸಂಚಾಲಕರಾಗಿ ರಾಮ ಮುಂಡಿತ್ತಡ್ಕ ಹಾಗೂ ಕಲಾ ಸಂಚಾಲಕರಾಗಿ ಬಾಲಕೃಷ್ಣ ಮಾಸ್ತರ್ ಮುಜುಕುಮೂಲೆ ಆಯ್ಕೆಯಾದರು.
ಬಳಿಕ ಮೂರು ಸಂಘಗಳ ಜಂಟಿ ಸಭೆಯು ಭಜನಾ ಸಂಘದ ಉಪಾಧ್ಯಕ್ಷ ನಾರಾಯಣ ಆಳ್ವ ಮಂಜಕೊಟ್ಟಿಗೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಬಗ್ಗೆ ಚರ್ಚೆ ನಡೆಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ಸ್ವಾಗತಿಸಿ, ಕಲಾ ಸಂಚಾಲಕ ಬಾಲಕೃಷ್ಣ ಮಾಸ್ತರ್ ವಂದಿಸಿದರು. ಸಂಘದ ಉಪಾಧ್ಯಕ್ಷ ವಾಸು ನಾಯ್ಕ ಬೀರಿಕುಂಜ ನಿರೂಪಿಸಿದರು.
ಸಂಘದ ಹಿರಿಯ ಕಿರಿಯ ಸದಸ್ಯರು ಹಾಗೂ ಮಹಿಳಾ ಸಂಘದ ಸದಸ್ಯೆಯರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು.
ಮುಂಡಿತ್ತಡ್ಕ ಶ್ರೀ ವಿಷ್ಣು ಕಲಾವೃಂದದ ಮಹಾಸಭೆ
0
ಜುಲೈ 26, 2022