ಮುಳ್ಳೇರಿಯ: ಮುಳಿಯಾರ್ ಕೃಷಿ ಭವನ ಮತ್ತು ಮುಳಿಯಾರು ಗ್ರಾಮ ಪಂಚಾಯಿತಿ ವತಿಯಿಂದ ಕೃಷಿಕ ಸಮಾವೇಶ ಹಾಗೂ ಕೃಷಿ ಉತ್ಪನ್ನಗಳ ಮಾರಾಟ ಸಂತೆ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಪಿ.ವಿ.ಮಿನಿ ಮಾರುಕಟ್ಟೆ ಸಂತೆ ಉದ್ಘಾಟಿಸಿದರು. ಉಪಾಧ್ಯಕ್ಷ ಎ ಜನಾರ್ದನನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೃಷಿ ಉಪನಿರ್ದೇಶಕ ಎಸ್.ಎಚ್.ಎಂ.ವೇಣುಗೋಪಾಲ್ ನಾಟಿ ಸಾಮಗ್ರಿಗಳನ್ನು ಉದ್ಘಾಟಿಸಿದರು. ಕೃಷಿ ಉತ್ಪನ್ನಗಳ ಮಾರಾಟ ನಡೆಸಲಾಗದೆ ಕಂಗಾಲಾಗಿದ್ದ ಕೃಷಿಕರಿಗೆ ತರಕಾರಿ ಸಂತೆ ಹೆಚ್ಚು ಪ್ರಯೋಜನಕಾರಿಯಯಿತು. ಪಂಚಾಯಿತಿ ವ್ಯಾಪ್ತಿಯ ರೈತರು ಉತ್ಪಾದಿಸುವ ನಾನಾ ಬಗೆಯ ನಾಟಿ ಉತ್ಪನ್ನಗಳು, ಸ್ಥಳೀಯ ತುಪ್ಪ, ಜೇನು, ವಿವಿಧ ಉಪ್ಪಿನಕಾಯಿ, Pಕೂವೆ ಹುಡಿಯಿಂದ ತಯಾರಿಸಿದ ಪಪ್ಪಡ, ಮರಗೆಣಸು, ದೇಶಿ ಅಡಕೆ, ಗಿಡ್ಡ ತೆಂಗಿನ ಸಸಿ, ಮೆಣಸಿನಕಾಯಿ,ಬದನೆಕಾಯಿ, ಟೊಮೇಟೊ ಮಾರಾಟಕ್ಕಿರಿಸಲಾಗಿತ್ತು.
ಕಾರಡ್ಕ ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್, ಬ್ಲಾಕ್ ಪಂ. ಸದಸ್ಯ ಕುಞಂಬು ನಂಬಿಯಾರ್, ಮುಳಿಯಾರ್ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿಸಾ ಮನ್ಸೂರ್ ಮುಂತಾದವರು ಉಪಸ್ಥಿತರೊದ್ದರು. ಕೃಷಿ ಅಧಿಕಾರಿ ಪಿ ರಾಮಕೃಷ್ಣನ್ ಸ್ವಾಗತಿಸಿದರು. ಕೃಷಿ ಸಹಾಯಕ ಎಂ. ಪುರುಷೋತ್ತಮನ್ ವಂದಿಸಿದರು.