ಕಾಸರಗೋಡು: ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಎಸ್‍ಡಿಪಿಐ ಕಾರ್ಯಕರ್ತ, ತಲಶ್ಯೇರಿ ಪಾರಲ್ ನಿವಾಸಿ ಆಬಿದ್ ಎಂಬಾತನನ್ನು ಕರ್ನಾಟಕದ ವಿಶೇಷ ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಈತ ತಲಶ್ಯೇರಿ ಕೀಳಂತಿಮುಕ್ ಎಂಬಲ್ಲಿ ಚಿಕನ್ ಫಾರ್ಮ್ ಒಂದರಲ್ಲಿ ಕೆಲಸ ನಡೆಸುತ್ತಿದ್ದನು.
ಆಬಿದ್ ಮನೆಗೆ ದಾಳಿ ನಡೆಸಿರುವ ಪೊಲೀಸರು ಮಾಹಿತಿ ಸಂಗ್ರಹಿಸಿದ ನಂತರ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಭಯೋತ್ಪಾದಕ ಛಾಯೆಯುಳ್ಳ ವಾಟ್ಸಪ್ ಗ್ರೂಪಿನ ಸದಸ್ಯನಾಗಿರುವುದಾಗಿ ಮಾಹಿತಿ ಲಭಿಸಿದೆ. ಪ್ರವೀಣ್ ಕೊಲೆಯಾದ ದಿನ ಈತ ದ.ಕ ಜಿಲ್ಲೆಯಲ್ಲಿದ್ದು, ನಂತರ ತಲಶ್ಯೇರಿಗೆ ವಾಪಸಾಗಿದ್ದಾನೆಂದು ಖಾಸಗಿ ವಾಹಿನಿಯೊಂದು ವಾರ್ತೆ ಪ್ರಕಟಿಸಿದೆ. ಜಾಗತಿಕ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನೇಕ ಮಂದಿ ಕೇರಳದಲ್ಲಿದ್ದು, ಸ್ಲೀಪರ್ ಸೆಲ್ ಆಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿಯಿದೆ.
ಪ್ರವೀಣ್ ಕೊಲೆ ಪ್ರಕರಣ: ತಲಶ್ಯೇರಿಯಿಂದ ಎಸ್.ಡಿ.ಪಿ.ಐ ಕಾರ್ಯಕರ್ತ ವಶಕ್ಕೆ
0
ಜುಲೈ 31, 2022