ಚೆನ್ನೈ: ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿರುವ ಡಿಎಂಕೆ ನಾಯಕ ಎ ರಾಜಾ ಅವರು, ಪ್ರತ್ಯೇಕ ದೇಶಕ್ಕಾಗಿ ಹೋರಾಟ ನಡೆಸುವ ಸ್ಥಿತಿಗೆ ನಮ್ಮನ್ನು ತಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ, ದ್ರಾವಿಡ ಚಳವಳಿಯ ನೇತಾರರಾದ ಪೆರಿಯಾರ್ ಅವರು ಸ್ವತಂತ್ರ ತಮಿಳುನಾಡುಗಾಗಿ ಪ್ರತಿಪಾದಿಸಿದ್ದರು. ಆದರೆ ಡಿಎಂಕೆ ಅದರಿಂದ ದೂರ ಸರಿದಿದೆ ಎಂದು ಹೇಳಿದರು.
ಈ ಸಂಬಂಧ ಪಶ್ಚಿಮ ತಮಿಳುನಾಡಿನ ನಾಮಕ್ಕಲ್‌ನಲ್ಲಿ ಸಮಾವೇಶ ನಡೆದಿತ್ತು. ನಮ್ಮ ಪಕ್ಷವು ಪೆರಿಯಾರ್ ಅವರನ್ನು ಒಪ್ಪಿಕೊಂಡರೂ, ಸಮಗ್ರತೆ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿದೆ. ಭಾರತದ ಒಳಿತನಕ್ಕೆ ಬಯಸುತ್ತಿರುವ ನಮ್ಮ ಇದನ್ನೆ ಮುಂದುವರೆಸಿಕೊಂಡು ಹೋಗಲು ಬಯಸುತ್ತದೆ. ಭಾರತಕ್ಕೆ ಜಯವಾಗಲಿ ಎಂದು ಹೇಳಿದರು.
"ನಾನು ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರಿಗೆ ಅತ್ಯಂತ ನಮ್ರತೆಯಿಂದ ಹೇಳುತ್ತಿದ್ದೇನೆ, ವೇದಿಕೆಯಲ್ಲಿ(ನಮ್ಮ) ನಾಯಕರ ಸಮ್ಮುಖದಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಮುಖ್ಯಮಂತ್ರಿ ಅಣ್ಣಾ (ಸಿಎನ್ ಅಣ್ಣಾದೊರೈ, ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಸಂಸ್ಥಾಪಕ) ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ನಮ್ಮನ್ನು ಪೆರಿಯಾರ್ ಹಾದಿಯಲ್ಲಿ ತಳ್ಳಬೇಡಿ. ನಮಗೆ ಪ್ರತ್ಯೇಕ ದೇಶ ಬೇಡುವಂತೆ ಮಾಡಬೇಡಿ, ರಾಜ್ಯಕ್ಕೆ ಸ್ವಾಯತ್ತತೆ ನೀಡಿ. ಅಲ್ಲಿಯವರೆಗೂ ನಾವು ವಿರಮಿಸುವುದಿಲ್ಲ,’’ ಎಂದು ರಾಜಾ ಹೇಳಿದ್ದಾರೆ.