ಕುಂಬಳೆ: ಸೀತಾಂಗೋಳಿಯ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ವಾರ್ಷಿಕ ಮಹಾಸಭೆ ಮಹಾಲಿಂಗ ಬೇಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ವಕೀಲ ಥೋಮಸ್ ಡಿಸೋಜ, ಉಪಾಧ್ಯಕ್ಷರಾಗಿ ಮನೋಜ್ ಎಸ್.ಬಿ., ಕಾರ್ಯದರ್ಶಿಯಾಗಿ ಪ್ರಸಾದ್ ಪಿ., ಜೊತೆಕಾರ್ಯದರ್ಶಿಯಾಗಿ ಭರತ್‍ರಾಜ್, ಖಜಾಂಜಿಯಾಗಿ ರಂಜಿತ್, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಎಂ. ಹಾಗೂ ಕಲಾಕಾರ್ಯದರ್ಶಿಯಾಗಿ ಅಪ್ಪಣ್ಣ ಸೀತಾಂಗೋಳಿ ಆಯ್ಕೆಯಾದರು. ಕ್ಲಬ್‍ನ ಹಿರಿಯ ಸದಸ್ಯರಾದ ಎಸ್.ಪಿ. ನಾರಾಯಣ, ಕೆ.ಎಂ.ಪಾಟಾಳಿ, ಜಯಂತ ಪಾಟಾಳಿ, ಮಾಲಿಂಗ ಪಾಟಾಳಿ, ರವಿ ಜೆ.ವಿ. ಹಾಗೂ ನಿರಂಜನ್ ಇವರನ್ನು ಸಲಹೆಗಾರರನ್ನಾಗಿ ಆರಿಸಲಾಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ವಕೀಲ ಥೋಮಸ್ ಡಿಸೋಜ ಅವರು ಮಾತನಾಡಿ ಯುವಜನಾಂಗವು ಕಲೆ ಮತ್ತು ಕ್ರೀಡೆಗೆ ಪ್ರೋತ್ಸಾಹವನ್ನು ನೀಡುವುದರೊಂದಿಗೆ ಸಾಮಾಜಿಕ ಕಾಳಜಿ, ಪರಿಸರಸ್ನೇಹಿಗಳಾಗಿರಬೇಕು ಎಂದರು. ರಮೇಶ್ ಮುಕಾರಿಕಂಡ ಸ್ವಾಗತಿಸಿ, ರಂಜಿತ್ ವಂದಿಸಿದರು.
ಸೀತಾಂಗೋಳಿ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಮಹಾಸಭೆ
0
ಜುಲೈ 12, 2022
Tags