HEALTH TIPS

ಒಂದೆಡೆ ಅವಿರತ ಮಳೆ: ಇನ್ನೊಂದೆಡೆ ಕೊಳೆತು ನಾರುತ್ತಿರುವ ಪೇಟೆ: ಸಾಂಕ್ರಾಮಿಕ ರೋಗ ಭೀತಿಯಲ್ಲಿ ಕುಂಬಳೆ

             ಕುಂಬಳೆ: ಸ್ವಚ್ಚ ಭಾರತದಂತಹ ಭಾರೀ ಪ್ರಚಾರದ ಯೋಜನೆ ಜಾರಿಯಲ್ಲಿದ್ದರೂ ನೈರ್ಮಲ್ಯ ಕಾಪಿಡುವಲ್ಲಿ ಸವಾಲುಗಳಿನ್ನೂ ಮುಕ್ತವಾಗಿಲ್ಲ. ಅತಿ ಜನನಿಬಿಡ ಪ್ರದೇಶವಾದ ಕುಂಬಳೆ ಪೇಟೆಯ ಹೃದಯ ಭಾಗವಾದ ಕುಂಬಳೆಯ ಸÀರ್ಕಾರಿ ಶಾಲೆಯ ಮತ್ತು ಕುಂಬಳೆ ಪೋಲೀಸ್ ಠಾಣಾ ಮಧ್ಯಭಾಗದಲ್ಲಿರುವ  "ಗಾಂಧಿ_ಮೈದಾನ" ಅಥವಾ ಕುಂಬಳೆಯ ಸ್ಕೂಲ್ ಗ್ರೌಂಡಿನ ಒಂದು ಮೂಲೆಯಲ್ಲಿ ಮೂಗು ಮುಚ್ಚಿ ಹೋಗಬೇಕಾದ ಸ್ಥಿತಿ ಅನೈರ್ಮಲಯದ ಜ್ವಲಂತ ಸಾಕ್ಷಿ. , ಈ ಮೈದಾನದಲ್ಲಿ ದಿನನಿತ್ಯ ಶಾಲಾ ಕಾಲೇಜಿನ ಮಕ್ಕಳು ಸಹಿತ ನೂರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಆಟವಾಡುತ್ತಿದ್ದು ಮತ್ತು ರಸ್ತೆಯಿಂದ ಗ್ರಾಮ ಕಚೇರಿ, ಪೆÇಲೀಸ್ ಠಾಣೆ , ಕೃಷಿಭವನ ಮತ್ತು ಪಂಚಾಯತಿ ಕಾರ್ಯಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಒಳದಾರಿ ಇದಾಗಿದ್ದು, ನಿತ್ಯ_ನಿರಂತರ_ಹೊತ್ತಿ_ಉರಿಯುವ ಈ ತ್ಯಾಜ್ಯ ರಾಶಿಗೆ ವಾರೀಸುದಾರರು ಮಾತ್ರ ಸಾಮಾಜಿಕ ಪ್ರಜ್ಞೆ ಇಲ್ಲದ ಕುಂಬಳೆಯ ಕೆಲವು ವ್ಯಾಪಾರಿಗಳು ಮತ್ತು ಇವರಿಗೆ ತ್ಯಾಜ ನಿಕ್ಷೇಪಕ್ಕೆ ಅಥವಾ ವಿಲೇವಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಜವಾಬ್ದಾರಿ ಕುಂಬಳೆಯ ಸ್ಥಳೀಯಾಡಳಿತ ಸಂಸ್ಥೆಗಾಗಿದ್ದು, ಆದ್ದರಿಂದ ಕುಂಬಳೆ ಗ್ರಾಮ ಪಂಚಾಯತ್ ಕೂಡ ಈ ತ್ಯಾಜ್ಯ ನಿಕ್ಷೇಪದ ಪ್ರಧಾನ ಸಹಭಾಗಿಗಳು. 


               ಕುಂಬಳೆ ಪಂಚಾಯತಿನಲ್ಲಿ ಪೇಟೆ ಪ್ರದೇಶ ಶುಚೀಕರಣಕ್ಕಾಗಲಿ, ತ್ಯಾಜ್ಯ ಸಂಗ್ರಹಕ್ಕಾಗಲಿ, ವಿಲೇವಾರಿಗಾಗಲಿ, ಯಾವುದೇ ವ್ಯವಸ್ಥೆಗಳಿಲ್ಲ. ಆದರೂ  ಪೇಟೆಯ ಹೆಚ್ಚಿನ ಎಲ್ಲಾ ವ್ಯಾಪಾರಿಗಳು ತಮ್ಮ ದೈನಂದಿನ ಕಸಗಳನ್ನು ಎಲ್ಲಿ ಹೇಗೆ ವಿಲೇವಾಗಿಮಾಡುತ್ತಾರೆ ಎಂಬುದು ನಿಗೂಢವಾದ ವಿಷಯ.

                ಶುಚಿತ್ವ ಮಿಷನ್ ಎಂಬ ಹೆಸರಿನಲ್ಲಿ ಪಂಚಾಯತಿನ ಖಜಾನೆ ತುಂಬುವ ಉದ್ದೇಶದಿಂದ ಮಾತ್ರ ಶುಚೀಕರಣಕ್ಕೆ ಆಯಾ ವಾರ್ಡು ಮಟ್ಟದಲ್ಲಿ ಹಸಿರು ಸೇನಾನಿಗಳನ್ನು ಶುಚೀಕರಣಕ್ಕೆ ನೇಮಿಸಿ ಕೆಲವೊಬುದು ರಸ್ತೆಬದಿಯ ಮನೆಗಳಿಂದ ಮಾತ್ರ ತಿಂಗಳಿಗೊಮ್ಮೆ 50 ರೂಪಾಯಿಯೊಂದಿಗೆ ಒಣಗಿಸಿದ ಪ್ಲಾಸ್ಟಿಕ್ ಲಕೋಟೆಗಳನ್ನು (ಇಸ್ತ್ರಿ ಹಾಕಿ ಇಟ್ಟರೆ ಉತ್ತಮ) ಮಾತ್ರ ಕೊಂಡೊಯ್ದು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಲಾದ ನಾಯಿಗೂಡಿನ ತರದ ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಇಡಲಾಗುತ್ತದೆ, (ಇದರಲ್ಲಿ ಸಾರ್ವಜನಿಕರು ತ್ಯಾಜ ನಿಕ್ಷೆಪಿಸಿದರೆ ದಂಡ ವಿಧಿಸಲಾಗುವುದು ಎಂದು ಅದರಲ್ಲಿ ನಮೂದಿಸಲಾಗಿದೆ ಇದರಿಂದ ಅವರ ಉದ್ದೇಶ ಶುಚಿತ್ವವಲ್ಲ, ಖಜಾನೆ ತುಂಬುವುದು ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ. #ಚಿತ್ರದಲ್ಲಿ ಹಳದಿ ಬೋರ್ಡಿನಲ್ಲಿ #ಮಲಯಾಳಂ ಅಕ್ಷರದಲ್ಲಿ ನಮೂದಿಸಿದನ್ನು ಕಾಣಬಹುದು.) ಮತ್ತು ಸಂಗ್ರಹಿಸಿದ ತ್ಯಾಜ್ಯವನ್ನು ಅಲ್ಲಿಂದ ಯಾವಾಗ., ಎಲ್ಲಿಗೆ., ಕೊಂಡೊಯ್ಯುತ್ತಾರೋ ಎಂಬುದನ್ನು ಕಾದುನೋಡಬೇಕಾಗುತ್ತದೆ.


       ಕುಂಬಳೆ ಪಂಚಾಯತಿನ ಶುಚಿತ್ವ ಮಿಷನ್ ನಿಂದ  ಮೊದಲಿಗೆ ಮಾಡಬೇಕಾಗಿರುವುದು ಪೇಟೆಯ ಇಂತಹ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಗೊಳಿದ ಇಂತಹ ಪ್ರದೇಶಗಳಲ್ಲಿ  ತ್ಯಾಜ್ಯವನ್ನು ಎಸೆಯುವವರ ವಿರುದ್ಧ ಕಟ್ಟು ನಿಟ್ಟಿನ ನಿರ್ದಾಕ್ಷಿಣ್ಯದ ಕಾನೂನು ಕ್ರಮ ಕೈಗೊಂಡ ನಂತರವಷ್ಟೇ ಶುದ್ಧ ವಾತಾವರಣದ ಹಳ್ಳಿಯ ಮನೆಗಳಿಂದ ಪ್ಲಾಸ್ಟಿಕ್ ತ್ಯಾಜವನ್ನು ಸಂಗ್ರಹಿಸಲು ಮುಂದಾಗಬೇಕು.

                ನಾಡಿನ ಅಭಿವೃದ್ಧಿ ವಿಷಯದಲ್ಲಿ ಆಡಳಿತ ಪಕ್ಷದಷ್ಟೆ ಹೊಣೆಗಾರಿಕೆ ಪ್ರತಿಪಕ್ಷಳಿಗೂ ಇದೆ. ಆಡಳಿತ ಪಕ್ಷ ಅದನ್ನು ನೆರವೇರಿಸಲು ವಿಫಲವಾದರೆ ಅದನ್ನು ಎದ್ದು ನಿಂತು ವಿಮರ್ಶಿಸುವ ಧೈರ್ಯ ತೋರದಿದ್ದರೆ, ಆಡಳಿತ ಪಕ್ಷದೊಂದಿಗೆ ಮೈತ್ರಿ ಮಾಡಿ ಅಧಿಕಾರ ನಡೆಸಿದಂತಾಗುತ್ತದೆ.



              ಅಭಿಮತ: 

        ಗ್ರಾಮ ಪಂಚಾಯತಿ ಶುಚಿತ್ವ ಮಿಷನ್ ಮೂಲಕ ತ್ಯಾಜ್ಯಗಳನ್ನು ಮುಂದಿನ ಎರಡು ದಿನಗಳಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗುವುದು. ಅತಿಯಾದ ವರ್ಷಧಾರೆಯ ಕಾರಣ ಪ್ರಸ್ತುತ ವಿಲೇವಾರಿಗೆ ತೊಡಕಿದೆ. ಗ್ರಾ.ಪಂ. ಉದ್ದೇಶಿತ ಸ್ಥಳವೊಂದರಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿದೆ.

                                               -ನಾಸರ್ ಮೊಗ್ರಾಲ್.

                                         ಉಪಾಧ್ಯಕ್ಷರು ಕುಂಬಳೆ ಗ್ರಾ.ಪಂ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries