ಶ್ರೀನಗರ: 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಲು ಬಿಜೆಪಿ ಹಮ್ಮಿಕೊಂಡಿರುವ ತಿರಂಗ ಬೈಕ್ ರ‍್ಯಾಲಿಗೆ ಸೋಮವಾರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಲಾಲ್‌ಚೌಕ್‌ನಿಂದ ಚಾಲನೆ ನೀಡಲಾಯಿತು.
ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದವರೆಗಿನ ಯಾತ್ರೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಂಗ್, ಸಂಸದ ತೇಜಸ್ವಿ ಸೂರ್ಯ ಅವರು ಹಸಿರು ನಿಶಾನೆ ತೋರಿದರು.
ಸುಮಾರು ನೂರಕ್ಕೂ ಹೆಚ್ಚು ಬೈಕ್‌ಗಳು ರ‍್ಯಾಲಿಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಬಿಜೆಪಿ ನಾಯಕರು ತಿರಂಗ ಹಿಡಿದು, 'ಆಜಾದ್ ಹಿಂದೂಸ್ತಾನ್ ಜಿಂದಾಬಾದ್', 'ಅಖಂಡ ಭಾರತ ಜಿಂದಾಬಾದ್' ಘೋಷಣೆ ಕೂಗಿದರು.
ಲಾಲ್‌ಚೌಕ್ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಕಾರಣ ಅಹಿತಕರ ಘಟನೆಗಳು ನಡೆಯದಂತೆ ಭಾರಿ ಬಿಗಿ ಭದ್ರತೆಯಲ್ಲಿ ಐತಿಹಾಸಿಕ 'ಘಂಟಾ ಘರ್' (ಕ್ಲಾಕ್ ಟವರ್)ನಲ್ಲಿ ಬೈಕ್ ರ‍್ಯಾಲಿಯನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಮೇಲೆ ನಿಗಾ ವಹಿಸಲು ಭದ್ರತಾ ಪಡೆ ಡ್ರೋನ್‌ಗಳನ್ನು ಬಳಸಿತ್ತು.