HEALTH TIPS

ನಿಗೂಢತೆ ಸೃಷ್ಟಿಸಿದ ಹಡಗು ಸಂಚಾರ

               ಕಾಸರಗೋಡು: ಹೊಸದುರ್ಗ ಬಲ್ಲಾಕಡಪ್ಪುರದ ಆಳ ಸಮುದ್ರದಲ್ಲಿ ಹಡಗು ಪತ್ತೆಯಾಗಿದ್ದು, ನಿಗೂಢತೆಗೆ ಕಾರಣವಾಗಿದೆ. ಸಮುದ್ರ ಕರಾವಳಿ ಜಾಗ್ರತಾ ಪಡೆ ಹಡಗಿನ ಬಗ್ಗೆ ಕರಾವಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು,  ಈ ನಿಟ್ಟಿನಲ್ಲಿ ಪೊಲೀಸ್ ಹಾಘೂ ಕರಾವಳಿ ಪೊಲೀಸರು ನಿಗಾವಹಿಸುತ್ತಿದ್ದಾರೆ.ಭಾರತೀಯ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಹಡಗುಗಳು ಬಂದರು ಹೊರತೊಡಿಸಿ ಸಮುದ್ರ ದಡದ ಸನಿಹದಿಂದ ಹಾದುಹೋಗುತ್ತಿಲ್ಲ. ಇದರಿಂದ ಬಲ್ಲಾ ಕಡಪ್ಪುರ ಸಮಿಹ ಕಂಡು ಬಂದಿರುವ ಹಡಗಿನ ಬಗ್ಗೆ ಊಹಾಪೋಹ ಎದುರಾಗಿದ್ದು, ಈ ಬಗ್ಗೆ ಗುಪ್ತಚರ ವಿಭಾಗವೂ ಕಾರ್ಯಾಚರಣೆಗೆ ಮುಂದಾಗಿದೆ. ಸಮುದ್ರ ಮಾರ್ಗವಾಗಿ ಮಾರಕಾಯುಧ, ಚಿನ್ನ ಸಾಗಾಟ ಅಲ್ಲದೆ ಭಯೋತ್ಪಾದಕರು ನುಸುಳುವ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಎಲ್ಲ ರಾಜ್ಯಗಳಿಗೂ ಮಾಹಿತಿ ನೀಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries