ನವದೆಹಲಿ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‍ನಲ್ಲಿ ಭಾರತೀಯ ರೈಲ್ವೆಯು ಸ್ಲೀಪಿಂಗ್ ಪಾಡ್ ಹೋಟೆಲ್ ಅನ್ನು ತೆರೆದಿದೆ. ಪಾಡ್‍ಗಳು ಪ್ರಯಾಣಿಕರಿಗೆ ಎಲ್ಲಾ ರೀತಿಯ ವಸತಿ ಸೌಕರ್ಯಗಳನ್ನು ಒದಗಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಕೇಂದ್ರ ರೈಲ್ವೆ ಸಚಿವರು ಈ ಚಿತ್ರಗಳನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಸೇವೆಗಾಗಿ ಆಧುನಿಕ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ನಿಮ್ಮ ಸೇವೆಯಲ್ಲಿ ಹೊಸ ಯುಗದ ಸೌಲಭ್ಯಗಳು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಸ್ಲೀಪಿಂಗ್ ಪಾಡ್‍ಗಳು. ಠಿiಛಿ.ಣತಿiಣಣeಡಿ.ಛಿom/x5ಜಜಿಟಛಿಓಡಿzಃ
ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಮಾತನಾಡಿ, ಪ್ರಯಾಣಿಕರಿಗಾಗಿ 30 ಸಿಂಗಲ್ ಪಾಡ್, 6 ಡಬಲ್ ಪಾಡ್, ನಾಲ್ಕು ಫ್ಯಾಮಿಲಿ ಪಾಡ್ ಸೇರಿದಂತೆ 40 ಪಾಡ್ ಗಳನ್ನು ಆರಂಭಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ಪಾಡ್ ಹೋಟೆಲ್, ಪ್ರಯಾಣಿಕರಿಗೆ ಮೊಬೈಲ್ ಚಾಜಿರ್ಂಗ್, ಲಾಕರ್ ರೂಮ್, ಡೀಲಕ್ಸ್ ಟಾಯ್ಲೆಟ್ ಮತ್ತು ಬಾತ್ರೂಮ್ ಸೇರಿದಂತೆ ಸೌಕರ್ಯಗಳನ್ನು ಒದಗಿಸುತ್ತದೆ. ಇದರ ಗಾತ್ರ ಆರರಿಂದ ಎಂಟು ಅಡಿ. ಇಂಟರ್ಕಾಮ್ ಮತ್ತು ಫೈರ್ ಅಲಾರ್ಮ್ ಸೇವೆಗಳು ಸಹ ಲಭ್ಯವಿದೆ.
ಹೋಟೆಲ್ ಸಿಎಸ.ಎಂ.ಟಿ ಯಲ್ಲಿ ಕಾಯುವ ಕೋಣೆಯ ಸಮೀಪದಲ್ಲಿದೆ. ಈ ಸ್ಲೀಪಿಂಗ್ ಪಾಡ್‍ಗಳನ್ನು ಆನ್‍ಲೈನ್‍ನಲ್ಲಿ (ಅಪ್ಲಿಕೇಶನ್ ಮೂಲಕ) ಅಥವಾ ಹೋಟೆಲ್‍ಗಳಲ್ಲಿ ವೈಯಕ್ತಿಕವಾಗಿ ಬುಕ್ ಮಾಡಬಹುದು ಎಂದು ಸುತಾರ್ ಹೇಳಿರುವರು.