ಬದಿಯಡ್ಕ: ಎಡನೀರು ಶ್ರೀಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯ ವ್ರತವು ಬುಧವಾರ ವ್ಯಾಸಪೂಜೆಯೊಂದಿಗೆ ಪ್ರಾರಂಭವಾಯಿತು.
ಪ್ರಾತಃಕಾಲ ಶ್ರೀ ಮಹಾಗಣಪತಿ ಹೋಮ ನಡೆಯಿತು. ನಂತರ ವ್ಯಾಸಪೂಜೆ, ಸುಕೃತ ಹೋಮಗಳಾದ ಶ್ರೀ ದಕ್ಷಿಣಾಮೂರ್ತಿ ಹೋಮ, ಶ್ರೀ ಗೋಪಾಲಕೃಷ್ಣ ಮಂತ್ರ ಹೋಮ, ಶ್ರೀಸೂಕ್ತ ಹೋಮ, ಶ್ರೀ ವಿರಾಜ ಮಂತ್ರ ಹೋಮ ಮತ್ತು ಬೃಂದಾವನದಲ್ಲಿ ಅಷ್ಠಾನರಾಗಿರುವ ಎಲ್ಲಾ ಶ್ರೀ ಗುರುಗಳಿಗೂ ವಿಶೇಷವಾದ ಹಸ್ತೋದಕ ಬಿಕ್ಷಾ ಸೇವೆಯು ಜರಗಿತು. ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ಗಣ್ಯರು, ಶ್ರೀಮಠದ ಭಕ್ತಾದಿಗಳು, ಶಿಷ್ಯವೃಂದದವರು ಪಾಲ್ಗೊಂಡಿದ್ದರು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿತು.