ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ಯು. ಪಿ ವಿಭಾಗದ ಪ್ರತಿಧ್ವನಿ ಕನ್ನಡ ಮಾಸಪತ್ರಿಕೆಯ ಲಾಂಛನವನ್ನು ಶಾಲಾ ಮುಖ್ಯಶಿಕ್ಷಕ ಇಬ್ರಾಹಿಂ ಬಿ ಇವರು ಬಿಡುಗಡೆಗೊಳಿಸಿದರು. ಹಿರಿಯ ಶಿಕ್ಷಕಿ ಪ್ರೇಮಾವತಿ, ಪುಷ್ಪಲತ, ದೀಪ್ತಿ, ಪ್ರವೀಣ್, ಅಶ್ರಫ್, ಸಂಜೀವ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಶಿವಗಣೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದನು.