ಕಾಸರಗೋಡು: ನಗರದ ಚಂದ್ರಗಿರಿ ಹೊಳೆಗೆ ಬಿದ್ದು ಯುವಕ ನಾಪತ್ತೆಯಾಗಿದ್ದು, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟದಲ್ಲಿ ತೊಡಗಿದ್ದಾರೆ. ಕೊಂಬನಡ್ಕ ನಿವಾಸಿ ಅಹಮ್ಮದ್ ಆಲಿ ಅವರ ಪುತ್ರ ಆಯೂಬ್ ನಾಪತ್ತೆಯಾದ ಯುವಕ. ಬೈಕಲ್ಲಿ ಆಗಮಿಸಿದ ಈತ ಚಂದ್ರಗಿರಿ ಸೇತುವೆ ಸನಿಹ ಆಗಮಿಸಿ, ತನ್ನ ಮೊಬೈಲ್ ನಾಪತ್ತೆಯಾಗಿರುವುದಾಗಿ ತಿಳಿಸಿ ಹುಡುಕಾಡುತ್ತಿದ್ದನು. ಅಲ್ಪ ಹೊತ್ತಿನ ನಂತರ ಈತ ನಾಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.