HEALTH TIPS

ದೆಹಲಿ: ಚಲಿಸುತ್ತಿದ್ದ ಮೆಟ್ರೋ ರೈಲಿನೆದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

         ನವದೆಹಲಿ: ಚಲಿಸುತ್ತಿದ್ದ ಮೆಟ್ರೋ ರೈಲಿಗೆ ಎದುರಾಗಿ ಹಳಿ ಮೇಲೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದೆಹಲಿ ಮೆಟ್ರೋದ ಹಳದಿ ಮಾರ್ಗದಲ್ಲಿ ಸೋಮವಾರ ವರದಿಯಾಗಿದೆ.

          ಜೋರ್ ಬಾಘ್‌ ಮೆಟ್ರೊ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇದರಿಂದಾಗಿ ರೈಲು ಸಂಚಾರಕ್ಕೆ ಕೆಲಕಾಲ ತೊಂದರೆಯಾಗಿದೆ.


                  ಪ್ರಕರಣ ಕುರಿತು ಬೆಳಗ್ಗೆ 11.23ಕ್ಕೆ ಟ್ವೀಟ್‌ ಮಾಡಿದ್ದ ದೆಹಲಿ ಮೆಟ್ರೊ ರೈಲು ನಿಗಮವು (ಡಿಎಂಆರ್‌ಸಿ), ಜೋರ್ ಬಾಘ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರು ರೈಲು ಹಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಹಳದಿ ಮಾರ್ಗದಲ್ಲಿನ ಸಂಚಾರ ವ್ಯತ್ಯಯವಾಗಲಿದೆ. ಉಳಿದ ಮಾರ್ಗಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿತ್ತು. ನಂತರ, 11.32ಕ್ಕೆ ಮತ್ತೊಂದು ಟ್ವೀಟ್‌ ಮಾಡಿ, ಸಂಚಾರ ಪುನರಾರಂಭವಾಗಿದೆ ಎಂದು ತಿಳಿಸಿದೆ.

            ರೈಲು, ಹುಡಾ ಸಿಟಿ ಕಡೆಗೆ ಚಲಿಸುತ್ತಿದ್ದಾಗ ಮಹಿಳೆ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಜಿಗಿದಿದ್ದಾರೆ. ಈ ವೇಳೆ ರೈಲು ಮಹಿಳೆಗೆ ಡಿಕ್ಕಿಯಾಗಿದ್ದು, ತಲೆಗೆ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಸಫ್ದಾರ್‌ಜಂಗ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

               ಮಹಿಳೆಗೆ ಸುಮಾರು 50 ವರ್ಷ ವಯಸ್ಸಾಗಿದ್ದು ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

                  ಹಳದಿ ಮಾರ್ಗವು ದೆಹಲಿಯ ಸಮಯ್‌ಪುರ ಬದ್ಲಿ ನಿಲ್ದಾಣದಿಂದ ಗುರುಗ್ರಾಮದ ಹುಡಾ ಸಿಟಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries