ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ವ್ಹೀಲ್ ಚೇರ್ ನಲ್ಲಿ ಆಗಮಿಸಿದ್ದರು. 89 ವರ್ಷದ ಮನಮೋಹನ್ ಸಿಂಗ್ ಅವರು ಮೊದಲ ಬಾರಿಗೆ ಸಂಸತ್ ಭವನದಲ್ಲಿ ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್ ನಾಯಕ ಸಿಂಗ್ ಮತ ಚಲಾಯಿಸಲು ನಾಲ್ವರು ಅಧಿಕಾರಿಗಳು ಸಹಾಯ ಮಾಡಿದರು.
ಮತದಾನದ ಮೊದಲ ಗಂಟೆಯಲ್ಲಿ ಮನಮೋಹನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದ್ದು ಕಂಡುಬಂತು.
ಹಲವು ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಮನಮೋಹನ್ ಸಿಂಗ್ ಅವರನ್ನು ಅನೇಕ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ಸಿಂಗ್ ರನ್ನು ಸ್ಫೂರ್ತಿ ಎಂದು ಕರೆದರು.
ಆರೋಗ್ಯ ಹದಗೆಟ್ಟಿದ್ದರೂ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪೂರೈಸಲು ಸಂಸತ್ತನ್ನು ತಲುಪಿದ ಸರ್ದಾರ್ ಮನಮೋಹನ್ ಸಿಂಗ್ ಅವರು ನಮಗೆಲ್ಲ ಸ್ಫೂರ್ತಿ, ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡಲಿ ಎಂದು ಯುವ ಕಾಂಗ್ರೆಸ್.ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರು ಆದಷ್ಟು ಬೇಗ ಉತ್ತಮ ಆರೋಗ್ಯವನ್ನು ಮರಳಿ
ಪಡೆಯಲಿ ಎಂದು ಹಲವರು ಹಾರೈಸಿದ್ದಾರೆ.