ನವದೆಹಲಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಆನೆಗಳು ಬರುವುದು ಸಾಮಾನ್ಯವಾಗಿದೆ.ಇನ್ನು ಹೊಲ-ಗದ್ದೆ, ಕಾಡಿನಲ್ಲಿ ಮನುಷ್ಯರ ಮೇಲೆ ಆನೆಗಳು ದಾಳಿ ನಡೆಸುತ್ತಿರುತ್ತವೆ. ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಆನೆಗಳ ದಾಳಿಗೆ ಬಲಿಯಾದವರ ಸಂಖ್ಯೆಗೇನು ಕಮ್ಮಿ ಇಲ್ಲ.

ಒಟ್ಟಿನಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಸಂಖ್ಯೆಯಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿದೆ. ಮೂರು ವರ್ಷದಲ್ಲಿ 322ಮಂದಿ ಆನೆದಾಳಿಗೆ ಬಲಿಯಾಗುವ ಮೂಲಕ ದಾಖಲೆ ಬರೆದಿದೆ. ಇನ್ನು ಕರ್ನಾಟಕದಲ್ಲೂ ಸಹ ಆನೆ ದಾಳಿಗೆ ಬಲಿಯಾದವರ ಸಂಖ್ಯೆಗೇನೂ ಕಡಿಮೆ ಇಲ್ಲ. ಬರೋಬ್ಬರಿ 69ಮಂದಿ ಆನೆದಾಳಿಯಿಂದ ಸಾವನ್ನಪ್ಪಿದ್ದಾರೆ.
ಈ ಕುರಿತು ಮಂಗಳವಾರ ಲೋಕಸಭೆಗೆ ಕೇಂದ್ರ ಪರಿಸರ ಸಚಿವಾಲಯ ಮಾಹಿತಿ ನೀಡಿದೆ.2019ರಲ್ಲಿ 16 ರಾಜ್ಯಗಳಿಂದ 585ಮಂದಿ ಸಾವನ್ನಪ್ಪಿದ್ದು, 2020-21ರಲ್ಲಿ 461 ಮತ್ತು 2021-22ರಲ್ಲಿ 532 ಮಂದಿ ಬಲಿಯಾಗಿದ್ದಾರೆ ಎಂದು ವಿವರಿಸಲಾಗಿದೆ. ಜಾರ್ಖಂಡ್ 291, ಪಶ್ಚಿಮ ಬಂಗಾಳ 240, ಅಸ್ಸಾಂ 229, ಛತ್ತೀಸ್ಗಢ, 183 ಮತ್ತು ತಮಿಳುನಾಡಿನಲ್ಲಿ 132ಮಂದಿ ಆನೆ ದಾಳಿಗೆ ಸಾವನ್ನಪ್ಪಿದ್ದಾರೆ.
ಕೇರಳ, ಕರ್ನಾಟಕ, ಮೇಘಾಲಯ ಮತ್ತು ಆಂಧ್ರ ಪ್ರದೇಶದಲ್ಲಿ ಕ್ರಮೇಣ 69,57, 12 ಮತ್ತು 10 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕೆ ಆ ಭಾಗದ ವನ್ಯಜೀವಿ ಇಲಾಖೆಯೇ ಜಾವಾಬ್ದಾರಿಯಾಗಿದೆ ಎಂದು ಹೇಳಿದೆ. ಇನ್ನು ಆನೆದಾಳಿ ತಗ್ಗಿಸಲು ಮತ್ತು ಆನೆಗಳ ಪ್ರತಿಕಾರದ ಹತ್ಯೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನು ಪ್ರಾಣಕಳೆದುಕೊಂಡವರಿಗೆ ಪರಿಹಾರವನ್ನೂ ಕೂಡ ನೀಡಲಾಗುತ್ತಿದೆ ಎಂದು ಸಚಿವಾಲಯ ಲೋಕಸಭೆಗೆ ತಿಳಿಸಿದೆ.