HEALTH TIPS

ಕುಟುಂಬಶ್ರೀ ಆಗ್ರೋ ನರ್ಸರಿಯಲ್ಲಿ ಸಸಿ ವಿತರಣೆ ಆರಂಭ

Top Post Ad

Click to join Samarasasudhi Official Whatsapp Group

Qries

                    ಕಾಸರಗೋಡು: ಟೀಮ್ ಬೆಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ತಂಡ ಬೇಡಡ್ಕ ಕುಟುಂಬಶ್ರೀ ಆಗ್ರೋ ನರ್ಸರಿ ವತಿಯಿಂದ ಉತ್ತಮ ತಳಿಯ ಹಲಸು, ತೆಂಗಿನ ಸಸಿಗಳ ವಿತರಣೆಗೆ ಚಾಲನೆ ನೀಡಲಾಯಿತು.  ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅವರು ಕೃಷಿ ಅಧಿಕಾರಿ ಪ್ರವೀಣ್ ಅವರಿಗೆ ಸಸಿ ವಿತರಿಸುವ ಮೂಲಕ ಉದ್ಘಾಟಿಸಿದರು. 

                       ಸಂಸ್ಥೆಯ ಎಂ.ಡಿ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಎಡಿಎಂಸಿಸಿಎಚ್ ಇಕ್ಬಾಲ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾಗೋಪಿ, ಪಂಚಾಯಿತಿ ಸದಸ್ಯರಾದ ರಘುನಾಥ್, ಶ್ರುತಿ, ತ್ಯಾಂಪನ್, ಗೋಪಾಲಕೃಷ್ಣನ್, ಸಿಡಿಎಸ್ ಅಧ್ಯಕ್ಷೆ ಗುಲಾಬಿ, ತಾ.ಪಂ ಸದಸ್ಯ ಸಿ.ರಾಮಚಂದ್ರನ್ ಉಪಸ್ಥಿತರಿದ್ದರು.  

                     ಸಿಂಧೂರ್ ಜಾಕ್ ಫ್ರೂಟ್, ವಿಯೆಟ್ನಾಂ ಸೂಪರ್ ಅರ್ಲಿ, ಗಮ್ ಲೆಸ್ ಜ್ಯಾಕ್ ಫ್ರೂಟ್, ಕಿಲೋ ಪಿಯರ್, ಆಲ್ ಸೀಸನ್ ಮಾವು ಮತ್ತು ಅಡಕೆ ಸಸಿಗಳಾದ ಇಂಟರ್ ಮಂಗಲ, ಮೋಹಿತ್ ನಗರ ಮುಂತಾದ ಹೆಚ್ಚಿನ ಇಳುವರಿ ನೀಡುವ ಹಣ್ಣಿನ ಮರವಾಗಬಲ್ಲ ಸಸಿಗಳ ವಿತರಣೆ ನಡೆಯಿತು. ಟೀಮ್ ಬೆಡಕಂ ಕುಟುಂಬಶ್ರೀ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ನೇತೃತ್ವದಲ್ಲಿ ಈ ತಿಂಗಳಿನಿಂದ ಕಾಞÂರತಿಂಗಲ್  ನರ್ಸರಿ ಕಾರ್ಯಾರಂಭ ಮಾಡಲಿದೆ. ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ನರ್ಸರಿಯಲ್ಲಿ  ಬೀಜಗಳು, ಸಸಿಗಳು ಮತ್ತು ರಸಗೊಬ್ಬರ ಸುಲಭದರದಲ್ಲಿ ಲಭ್ಯವಿದ್ದು, ಜನರಿಗೆ ತಲುಪಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಟೀಮ್ ಬೆಡಕಂ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಲಿಮಿಟೆಡ್ ಬೇಡಡ್ಕ ಗ್ರಾಮ ಪಂಚಾಯಿತಿ ಸಿಡಿಎಸ್ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಯೋಗದಲ್ಲಿ ಕಂಪೆನಿ ಆರಂಭಿಸಲಾಗಿದೆ. 



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries