ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಲ್ಲಿರುವ ಜನರ ಸುರಕ್ಷತೆಗೆ ತಕ್ಷಣ ಕ್ರಮಕೈಗೊಳ್ಳಲು ತಾಲೂಕು ತಹಸೀಲ್ದಾರರಿಗೆ ಹೊಣೆ ವಹಿಸಲಾಗಿದೆ.
ತಾಲೂಕುಗಳಲ್ಲಿ 24ತಾಸು ಕಾಲ ಕಾರ್ಯಾಚರಿಸುವ ನಿಯಂತ್ರಣ ಕೊಠಡಿ ಸ್ಥಾಪಿಸಲು ಸೂಚಿಸಲಾಗಿದ್ದು, ಕಿರಿಯ ಅಧೀಕ್ಷಕರು, ಉಪ ತಹಸೀಲ್ದಾರರಿಗೆ ಇದರ ಜವಾಬ್ದಾರಿವಹಿಸಿಕೊಡಲಾಗಿದೆ.
ಕ್ವಾರಿ ಚಟುವಟಿಕೆ ನಿಲುಗಡೆಗೆ ಆದೇಶ:
ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕ್ವಾರಿಗಳನ್ನು ತತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ನಿರ್ದೇಶಿಸಿದ್ದಾರೆ. ಯಾವುದೇ ವಿಪತ್ತು ವರದಿಯಾದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕಿನ ಜವಾಬ್ದಾರಿ ಅಪರ ಜಿಲ್ಲಾಧಿಕಾರಿಗೆ, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಜವಾಭ್ದಾರಿಯನ್ನು ಕಾಸರಗೋಡು ಕಂದಾಯ ವಿಭಾಗಾಧಿಕಾರಿ ಸಮನ್ವಯಗೊಳಿಸಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿ
ಸ್ಥಿರ ದೂರವಾಣಿ : 04994-257700
ಮೊಬೈಲ್ : 9446601700
ತಾಲೂಕು ನಿಯಂತ್ರಣ ಕೊಠಡಿ ಸಂಖ್ಯೆ
ಕಾಸರಗೋಡು - 04994-230021/ 9447030021
ಮಂಜೇಶ್ವರ - 04998-244044/ 8547618464
ಹೊಸದುರ್ಗ- 04672-204042/ 9447494042
ವೆಳ್ಳರಿಕುಂಡ್ - 04672-242320/ 8547618470
ಚಿತ್ರ ಮಾಹಿತಿ: ಚೆರ್ಕಳ ಪಂಚಾಯಿತಿಯ ಏಳನೇ ವಾರ್ಡು ನೆಲ್ಲಿಕಟ್ಟೆಯಲ್ಲಿ ಸೌಜಾ ಎಂಬವರ ಮನೆ ನೀರಿನಿಂದಾವೃತವಾಗುತ್ತಿದ್ದಂತೆ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆಸಿ ಕುಟುಂಬದವರನ್ನು ಸ್ಥಳಾಂತರಿಸಲಾಯಿತು.