ನವದೆಹಲಿ: ಪ್ರೀಮಿಯಂ ರೈಲುಗಳಲ್ಲಿ ಮೊದಲೇ ಆರ್ಡರ್ ಮಾಡದಿರುವ ಊಟ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೆಯು ತೆಗೆದುಹಾಕಿದೆ. ಆದರೆ, ತಿನಿಸುಗಳು, ಊಟಗಳ ದರಗಳಿಗೆ ₹ 50 ಸೇವಾ ಶುಲ್ಕವನ್ನು ಸೇರಿಸಲಾಗಿದೆ.
ನವದೆಹಲಿ: ಪ್ರೀಮಿಯಂ ರೈಲುಗಳಲ್ಲಿ ಮೊದಲೇ ಆರ್ಡರ್ ಮಾಡದಿರುವ ಊಟ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೆಯು ತೆಗೆದುಹಾಕಿದೆ. ಆದರೆ, ತಿನಿಸುಗಳು, ಊಟಗಳ ದರಗಳಿಗೆ ₹ 50 ಸೇವಾ ಶುಲ್ಕವನ್ನು ಸೇರಿಸಲಾಗಿದೆ.
ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಹಿಂದಿನ ನಿಯಮಗಳ ಪ್ರಕಾರ, ಪ್ರಯಾಣಿಕರು ತಮ್ಮ ಟಿಕೆಟ್‌ನೊಂದಿಗೆ ಊಟವನ್ನು ಕಾಯ್ದಿರಿಸದಿದ್ದರೆ ಪ್ರಯಾಣದ ವೇಳೆ ಅವರು ಆರ್ಡರ್ ಮಾಡುವಾಗ ಹೆಚ್ಚುವರಿಯಾಗಿ ₹50 ಪಾವತಿಸಬೇಕಾಗಿತ್ತು.
ಈಗ ರಾಜಧಾನಿ, ದುರಂತೋ ಅಥವಾ ಶತಾಬ್ದಿಯಂತಹ ವಿಶೇಷ ರೈಲುಗಳಲ್ಲಿ ತಮ್ಮ ಊಟವನ್ನು ಮುಂಚಿತವಾಗಿ ಕಾಯ್ದಿರಿಸದ ಪ್ರಯಾಣಿಕರು ಚಹಾ ಮತ್ತು ಕಾಫಿಗೆ ₹ 20 ಪಾವತಿಸಿದರೆ ಸಾಕು. ಈ ಹಿಂದೆ ಮುಂಗಡ ಕಾಯ್ದಿರಿಸದ ಚಹಾ/ಕಾಫಿಗೆ ಸೇವಾ ಶುಲ್ಕ ಸೇರಿ ₹70 ಪಾವತಿಸಬೇಕಾಗಿತ್ತು.
ಈ ಹಿಂದೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ತಿನಿಸುಗಳ ದರ ಕ್ರಮವಾಗಿ ₹105, ₹185 ಮತ್ತು ₹90 ಆಗಿತ್ತು. ಪ್ರತಿ ಊಟಕ್ಕೆ ₹ 50 ಸೇವಾಶುಲ್ಕವನ್ನು ವಿಧಿಸಲಾಗುತ್ತಿತ್ತು. ಆದರೆ, ಈ ಶುಲ್ಕವನ್ನು ಉಪಾಹಾರ/ಊಟಗಳ ದರಕ್ಕೆ ಸೇರಿಸಲಾಗಿದೆ. ಹಾಗಾಗಿ, ಪ್ರಯಾಣಿಕರು ಈಗ ಇವುಗಳಿಗೆ ಕ್ರಮವಾಗಿ ₹155, ₹235 ಮತ್ತು ₹140 ಪಾವತಿಸಬೇಕಾಗುತ್ತದೆ.