HEALTH TIPS

ಮಹಿಳೆಯರೇ, ಅಸಹಜ ಮುಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ

 ಮಹಿಳೆಯರಿಗೆ ಆ ದಿನಗಳು ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ಟೆನ್ಷನ್ ಶುರುವಾಗಿರುತ್ತೆ. ಮೂರು ದಿನಗಳ ಕಾಲ ನೋವು, ಕಿರಿಕಿರಿ ಅನುಭವಿಸಬೇಕಾದ ಮುಟ್ಟಿನ ದಿನಗಳನ್ನು ಶಪಿಸುವವರೇ ಹೆಚ್ಚು.

ತಿಂಗಳಿಗೊಮ್ಮೆ ಋತುಸ್ರಾವ ಆಗುವುದು ಸಾಮಾನ್ಯ. ಆದ್ರೆ ಕೆಲವರಲ್ಲಿ ಈ ದಿನಗಳಲ್ಲಿ ವ್ಯತ್ಯಾಸ ಕಂಡುಬರುವುದು. ಒಂದು ಅವಧಿಗಿಂತ ಬಹಳ ಮುನ್ನವೇ ಮುಟ್ಟಾಗುವುದು ಅಥವಾ ಅವಧಿ ಮೀರಿ ಮುಟ್ಟಾಗುವುದು. ಇದು ಆಗೊಮ್ಮೆ ಈಗೊಮ್ಮೆ ಆದರೆ ಚಿಂತಿಸುವ ಅಗತ್ಯವಿಲ್ಲ. ಆದರೆ ಪ್ರತಿ ತಿಂಗಳು ಇದೇ ರೀತಿಯ ವ್ಯತ್ಯಾಸಗಳು ಕಂಡು ಬರುತ್ತಿದ್ದರೆ ಅದು ಅಸಹಜ ಮುಟ್ಟಿನ ಲಕ್ಷಣವಾಗಿರುತ್ತೆ.

ಇದಕ್ಕೆ ವೈದ್ಯರನ್ನ ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಹಾಗಾದ್ರೆ, ಅಸಹಜ ಋತುಸ್ರಾವ ಎಂದರೇನು? ಅದರ ಲಕ್ಷಣಗಳೇನು ಎಂಬುದನ್ನು ಇಲ್ಲಿ ನೋಡೋಣ.

ನಿರ್ಲಕ್ಷಿಸಬಾರದ ಅಸಹಜ ಋತುಸ್ರಾವದ ಲಕ್ಷಣಗಳು :

2 ದಿನಗಳಿಗಿಂತ ಕಡಿಮೆ ಅಥವಾ 7 ದಿನಗಳಿಗಿಂತ ಹೆಚ್ಚು ರಕ್ತಸ್ರಾವ: ಸಾಮಾನ್ಯವಾಗಿ ಮುಟ್ಟಿನ ಚಕ್ರವು ನಾಲ್ಕರಿಂದ ಏಳು ದಿನಗಳವರೆಗೆ ಇರುತ್ತದೆ. ಆದ್ದರಿಂದ, ಮುಟ್ಟಿನ ಸಮಯದಲ್ಲಿ 2 ದಿನಕ್ಕಿಂತ ಕಡಿಮೆ ರಕ್ತಸ್ರಾವ ಅಥವಾ 7 ದಿನಕ್ಕಿಂತ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ, ಜೊತೆಗೆ ಇದು ಆಗಾಗ ಸಂಭವಿಸುತ್ತಿದ್ದರೆ, ವೈದ್ಯರ ಬಳಿ ಹೋಗುವುದು ಒಳ್ಳೆಯದು.
ಮುಟ್ಟಿನ ಸೈಕಲ್ 24 ದಿನಗಳಿಗಿಂತ ಕಡಿಮೆ ಅಥವಾ 38 ದಿನಗಳಿಗಿಂತ ಹೆಚ್ಚಿರುವುದು: ಪ್ರತಿ ಮಹಿಳೆಗೂ ಮುಟ್ಟಿನ ನಡುವಿನ ದಿನಗಳ ಸಂಖ್ಯೆಯು ಬದಲಾಗಬಹುದು, ಆದರೆ ಸಾಮಾನ್ಯ ವ್ಯಾಪ್ತಿಯು 24-38 ದಿನಗಳ ನಡುವೆ ಬರುತ್ತದೆ. ಆದ್ದರಿಂದ ಈ ಸಮಯದ ಚೌಕಟ್ಟಿನ ಹೊರಗೆ ಬರುವ ಮುಟ್ಟಿನ ಚಕ್ರವನ್ನು ಅನಿಯಮಿತ ಅಥವಾ ಅಸಹಜ ಋತುಸ್ರಾವ ಎಂದು ಕರೆಯಲಾಗುತ್ತದೆ. ಇದು ಪ್ರತಿ ತಿಂಗಳು ಸಂಭವಿಸಿದರೆ, ವೈದ್ಯರನ್ನು ನೋಡುವುದು ಸೂಕ್ತವಾಗಿದೆ

ಪ್ರತಿ 3 ಗಂಟೆಗಳಿಗೊಮ್ಮೆ ಪ್ಯಾಡ್ ಅಥವಾ ಟ್ಯಾಂಪೂನ್‌ಗಳನ್ನು ಬದಲಾಯಿಸುವುದು: ಮುಟ್ಟಿನ ವೇಳೆ ಆಗುವ ರಕ್ತಸ್ರಾವದ ಪ್ರಮಾಣವೂ ಸಹ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಆದಾಗ್ಯೂ, ನಿಮಗೆ ಪ್ರತಿ 3 ಗಂಟೆಗಳಿಗೊಮ್ಮೆ ಒಂದು ಅಥವಾ ಹೆಚ್ಚಿನ ಪ್ಯಾಡ್‌ಗಳು ಅಥವಾ ಟ್ಯಾಂಪೂನ್‌ಗಳು ಒದ್ದೆಯಾಗುತ್ತಿದ್ದರೆ, ಮೆನೊರ್ಹೇಜಿಯಾವನ್ನು ಹೊಂದಿರುವ ಸಾಧ್ಯತೆಗಳಿವೆ. ಅಂದರೆ, ಅಸಹಜವಾಗಿ ಹೆಚ್ಚು ಮುಟ್ಟಿನ ರಕ್ತಸ್ರಾವ ಎಂದರ್ಥ. ಭಾರೀ ರಕ್ತಸ್ರಾವದ ಜೊತೆಗೆ, ಮೆನೊರ್ಹೇಜಿಯಾದಿಂದ ಬಳಲುತ್ತಿರುವ ಮಹಿಳೆಯು ಆಯಾಸ ಅಥವಾ ಉಸಿರಾಟದ ತೊಂದರೆಯಂತಹ ರಕ್ತಹೀನತೆಯ ಲಕ್ಷಣಗಳನ್ನು ಸಹ ಹೊಂದಿರಬಹುದು. ಆದರೆ ಹೆಚ್ಚು ಚಿಂತಿಸಬೇಡಿ, ರಕ್ತಸ್ರಾವ ಹೆಚ್ಚಿರುವುದು ಸಾಮಾನ್ಯವಾಗಿದೆ. ನಿಮಗೆ ಅಗತ್ಯವಿದ್ದಲ್ಲಿ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.

ರಕ್ತಹೆಪ್ಪುಗಟ್ಟುವಿಕೆಯ ಗಾತ್ರ ಹೆಚ್ಚಿರುವುದು: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾಗಿದೆ. ಅಂದರೆ, ರಕ್ತಸ್ರಾವದ ವೇಳೆ ಹೊರಹೋಗುವ ಜೆಲ್ಲಿ ತರಹದ ವಸ್ತು. ಆದರೆ, ಈ ರಕ್ತ ಹೆಪ್ಪುಗಟ್ಟುವಿಕೆಯ ಗಾತ್ರ ಹೆಚ್ಚಾಗಿದ್ದರೆ, ಅಂದರೆ ದೊಡ್ಡ ಗಾತ್ರ ರಕ್ತ ಹೆಪ್ಪುಗಟ್ಟುವಿಕೆ ಹೊರಹೋಗುತ್ತಿದ್ದರೆ, ಏನೋ ತಪ್ಪಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ರಕ್ತಸ್ರಾವ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಗಾತ್ರ ಹೆಚ್ಚಿದ್ದರೆ, ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲು ಒಮ್ಮೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಒಂದು ಪ್ಯಾಡ್ ಅಗತ್ಯವಿಲ್ಲದಿರುವುದು ಅಥವಾ ಸ್ಪಾಟಿಂಗ್: ಸ್ಪಾಟಿಂಗ್ ಅಥವಾ ರಕ್ತದ ತೊಟ್ಟಿಕ್ಕುವಿಕೆಯನ್ನು ಸ್ಯಾನಿಟರಿ ಪ್ಯಾಡ್ ಬದಲಿಗೆ ಪ್ಯಾಂಟಿಲೈನರ್ ಮೂಲಕ ನಿರ್ವಹಿಸಬಹುದು. ಆದರೆ ಕಡಿಮೆ ರಕ್ತಸ್ರಾವದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ, ಅಮೆನೋರಿಯಾವು ಮುಟ್ಟಿನ ಅಸ್ವಸ್ಥತೆಯಾಗಿದ್ದು, ಇದು ಮೂರು ತಿಂಗಳು ನಿರಂತರವಾಗಿ ಮುಟ್ಟಾಗದೇ ಇರುವುದನ್ನು ಸೂಚಿಸುವುದು. ಆದ್ದರಿಂದ ಮಹಿಳೆಯ ಋತುಚಕ್ರವು ಹೆಚ್ಚು ಅನಿಯಮಿತವಾಗಿದ್ದರೆ ಅವರು ಅಮೆನೋರಿಯಾದಿಂದ ಬಳಲುತ್ತಿರಬಹುದು. ಇದಕ್ಕೆ ಹಲವಾರು ಕಾರಣಗಳಿದ್ದರೂ, ಅತ್ಯಂತ ಸಾಮಾನ್ಯವಾದವು ಸ್ತನ್ಯಪಾನ, ಗರ್ಭಾವಸ್ಥೆ ಅಥವಾ ಋತುಬಂಧದಂತಹ ಜೈವಿಕ ಬದಲಾವಣೆಗಳಾಗಿವೆ.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries