HEALTH TIPS

ಹಿಂಸಾಕೃತ್ಯ ಆರೋಪಿಗಳ ಆಸ್ತಿ ನೆಲಸಮ, ಮಧ್ಯಂತರ ಆದೇಶಕ್ಕೆ 'ಸುಪ್ರೀಂ' ನಕಾರ

          ನವದೆಹಲಿ: ಹಿಂಸೆ, ಗಲಭೆ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಆಸ್ತಿ ನೆಲಸಮಕ್ಕೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ತಡೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿತು.

            ಕಾನೂನುಬಾಹಿರ ನಿರ್ಮಾಣಗಳಿದ್ದಲ್ಲಿ ಅದರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಇರುತ್ತದೆ.

             ಈ ಬಗ್ಗೆ ಸಾರಾಸಗಟಾಗಿ ಆದೇಶ ನೀಡುವುದು ಹೇಗೆ ಸಾಧ್ಯ ಎಂದೂ ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

                'ಕಾನೂನು ನಿಯಮಗಳ ಪಾಲನೆಯನ್ನು ಯಾರೂ ಆಕ್ಷೇಪಿಸಲಾಗದು. ಈ ಕುರಿತು ಮಧ್ಯಂತರ ಆದೇಶ ನೀಡಲು ಸಾಧ್ಯವೇ? ಹಾಗೆ ಆದೇಶವನ್ನು ನೀಡಿದರೆ ಕಾನೂನು ಕ್ರಮಕೈಗೊಳ್ಳದಂತೆ ಸ್ಥಳೀಯ ಆಡಳಿತವನ್ನು ತಡೆದಂತಾಗುವುದಿಲ್ಲವೇ' ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠ ಪ್ರಶ್ನಿಸಿತು.

               ಹಿಂಸೆ, ಗಲಭೆ ಕೃತ್ಯಗಳ ಆರೋಪಿಗಳ ಆಸ್ತಿ ನೆಲಸಮ ಕುರಿತಂತೆ ಉತ್ತರ ಪ್ರದೇಶ ಮತ್ತು ಇತರೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ವಿರುದ್ಧ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಕೋರಿ ಜಮಾಯತ್‌ ಉಲಮಾ-ಐ-ಹಿಂದ್‌ ಅರ್ಜಿ ಸಲ್ಲಿಸಿತ್ತು.

               ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ.ಯು.ಸಿಂಗ್, ಯಥಾಸ್ಥಿತಿ ಕಾಯ್ದು ಕೊಳ್ಳಬೇಕು ಎಂಬ ಕೋರ್ಟ್‌ ಆದೇಶದ ನಂತರವೂ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೀಠದ ಗಮನಕ್ಕೆ ತಂದರು.

            ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ, 'ಕಾಯ್ದೆ ಉಲ್ಲಂಘಿಸಿ ನಿರ್ಮಾಣಮಾಡಿರುವ ಆರೋಪಿಗಳ ಆಸ್ತಿಯನ್ನು ನೆಲಸಮ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಲಾಗದು' ಎಂದು ಪ್ರತಿಪಾದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries