ವಯನಾಡ್ : ಕೋವಿಡ್ ಪಿಡುಗಿನ ಸಂದರ್ಭದಲ್ಲಿ ದೇಶದ ಲಕ್ಷಾಂತರ ಜನರ ಜೀವನವನ್ನು 'ನರೇಗಾ' ಯೋಜನೆ ಕಾಪಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದನ್ನು ಒಪ್ಪುವ ಔದಾರ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.
ವಯನಾಡ್ : ಕೋವಿಡ್ ಪಿಡುಗಿನ ಸಂದರ್ಭದಲ್ಲಿ ದೇಶದ ಲಕ್ಷಾಂತರ ಜನರ ಜೀವನವನ್ನು 'ನರೇಗಾ' ಯೋಜನೆ ಕಾಪಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದನ್ನು ಒಪ್ಪುವ ಔದಾರ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.
ದೇಶದ ಅಸಹಾಯಕ ಜನರಿಗಾಗಿ ಯುಪಿಎ ಸರ್ಕಾರ ಜಾರಿಗೊಳಿಸಿದ ಈ ಯೋಜನೆಯ ಮಹತ್ವವನ್ನು ಅರಿಯುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ಈ ಹಿಂದೆ 'ನರೇಗಾ ಯೋಜನೆಯನ್ನು ಕಾಂಗ್ರೆಸ್‌ನ ವೈಫಲ್ಯದ ಪ್ರತೀಕ' ಎಂದು ಜರಿದಿದ್ದ ಮೋದಿ ಅವರಿಗೆ ಈ ಯೋಜನೆ ಎಷ್ಟು ಸಮಗ್ರ ಮತ್ತು ಆಳವಾದದ್ದು ಎಂಬುದು ಗೊತ್ತಿಲ್ಲ. ಇದು ದೇಶದಲ್ಲಿ ಹೇಗೆ ಉದ್ಯೋಗ ಸೃಷ್ಟಿಸುತ್ತದೆ ಮತ್ತು ಲಕ್ಷಾಂತರ ಜನರಿಗೆ ಜೀವನ ನಡೆಸಲು ಹೇಗೆ ನೆರವಾಗಿದೆ ಎಂಬುದರ ಬಗ್ಗೆಯೂ ಅವರಿಗೆ ತಿಳಿದಿಲ್ಲ ಎಂದರು.
ದೇಶದ ಆರ್ಥಿಕ ವ್ಯವಸ್ಥೆಯುನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ದೋಷ ಪೂರಿತ ಅನುಷ್ಠಾನದಿಂದ ದುರ್ಬಲ ಗೊಂಡಿದೆ. ಈ ಸಂದರ್ಭದಲ್ಲೂ ಸಾಮಾನ್ಯ ಜನರ ಜೀವನೋಪಾಯಕ್ಕೆ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದು ವಯನಾಡಿನ ಸಂಸದರೂ ಆಗಿರುವ ರಾಹುಲ್ ಗಾಂಧಿ ಹೇಳಿದರು.
ಇಲ್ಲಿನ ನೆನ್ಮೆನಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ನರೇಗಾ ಕಾರ್ಮಿಕರನ್ನು 'ದೇಶದ ನಿರ್ಮಾತೃ ಗಳು' ಎಂದು ಉಲ್ಲೇಖಿಸಿದ ರಾಹುಲ್, ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ದಿನಗಳನ್ನು 200ಕ್ಕೆ ಏರಿಸಬೇಕು ಹಾಗೂ ಈ ಕಾರ್ಮಿಕರ ಕೂಲಿಯನ್ನು ದಿನಕ್ಕೆ ₹ 400ಕ್ಕೆ ಏರಿಸಬೇಕು. ಅಲ್ಲದೆ ಈ ಯೋಜನೆಯನ್ನು ಭತ್ತ ಕೃಷಿ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.