ಕುಂಬಳೆ: ಮುಜುಂಗಾವು ಶ್ರೀಭಾರತೀವಿದ್ಯಾಪೀಠದಲ್ಲಿ ಶಿಕ್ಷಕವರ್ಗ ಹಾಗೂ ಶಾಲಾ ಮಕ್ಕಳೊಂದಿಗೆ ಶ್ರೀಗುರುಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಭಾವ ಚಿತ್ರಕ್ಕೆ ನಮಿಸಿ, ಪುಷ್ಪಾರ್ಚನೆಯೊಂದಿಗೆ ಗುರುಸ್ತೋತ್ರವನ್ನು ಪಠಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕವೃಂದ, ಆಡಳಿತಮಂಡಳಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅವರು ಮಾತನಾಡಿ ನಮ್ಮ ಜೀವನದ ಪ್ರತಿ ಹಂತದಲ್ಲೂ ನಮಗೆ ಗುರುವಿನ ಮಾರ್ಗದರ್ಶನ ಅಗತ್ಯ. ಕುಲಗುರು, ವಿದ್ಯೆಕಲಿಸಿದ ಗುರುಗಳನ್ನು ಜೀವನದಲ್ಲಿ ಎಂದೂ ಮರೆಯಬಾರದು ಎಂದರು. ಅಧ್ಯಾಪಕ ವಿಜಯ ಕಾನ ಹಾಗೂ ಸಹಾಯಕ ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಮಕ್ಕಳಿಗೆ ಹಿತವಚನ ನೀಡಿದರು. ಶ್ಯಾಮರಾಜ್ ದೊಡ್ಡಮಾಣಿ, ಚಂದ್ರಶೇಖರ ಎಯ್ಯೂರು ಉಪಸ್ಥಿತರಿದ್ದರು.