ಕೊಚ್ಚಿ: ಕೇರಳದಲ್ಲಿ ವಿಜೃಂಭಿಸುತ್ತಿರುವ ಜಿಹಾದಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿಎಚ್ ಪಿ ದೂರು ಸಲ್ಲಿಸಿದೆ. ಕೇರಳದಲ್ಲಿ ಜಿಹಾದಿ ಸಂಘಟನೆಗಳ ಬೆಳವಣಿಗೆ ದೇಶಕ್ಕೇ ಅಪಾಯ ತಂದೊಡ್ಡುತ್ತಿದೆ. ಒಂದು ಕಾಲದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಕೇಂದ್ರವಾಗಿದ್ದ ಕಾಶ್ಮೀರ ಈಗ ಶಾಂತಿಯತ್ತ ಸಾಗುತ್ತಿದ್ದರೆ, ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಕೇರಳದ ಎಲ್ಲಾ ಭಯೋತ್ಪಾದನೆ ಪ್ರಕರಣಗಳಲ್ಲಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಮತ್ತು ಎಸ್ ಡಿ ಪಿ ಐ ಆರೋಪಿಗಳು ಇರುವುದರ ಬಗ್ಗೆ ವಿಎಚ್‍ಪಿ ಬೆಟ್ಟು ಮಾಡಿದೆ. ಕೇರಳದ ಯುವಕರು ಐಎಸ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಲವ್ ಜಿಹಾದ್ ನೆಪದಲ್ಲಿ ಹಿಂದೂ ಹಾಗೂ ಕ್ರೈಸ್ತ ಯುವತಿಯರನ್ನು ಮದುವೆಯಾಗಿ ಇಸ್ಲಾಮಿಕ್ ಉಗ್ರಗಾಮಿ ರಾಷ್ಟ್ರಗಳಿಗೆ ಕರೆತಂದು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಕೇರಳ ಗೃಹ ಇಲಾಖೆ ಮತ್ತು ಪೋಲೀಸರು ತನಿಖೆ ನಡೆಸಲು ಅಥವಾ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಾಗಿಗುತ್ತಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಇಸ್ಲಾಮಿಕ್ ಭಯೋತ್ಪಾದನೆಗೆ ಕೇರಳ ಅತ್ಯಂತ ಫಲವತ್ತಾದ ನೆಲವಾಗಿದೆ. ಕೇರಳದ ಆರ್‍ಎಸ್‍ಎಸ್-ಬಿಜೆಪಿ ಕಾರ್ಯಕರ್ತರ ಮಾಹಿತಿ ಪೋಲೀಸರಿಂದಲೂ ಸೋರಿಕೆಯಾಗುವ ಸ್ಥಿತಿಗೆ ಕೇರಳ ಬದಲಾಗಿದೆ. ಕೇರಳದಲ್ಲಿ ಇಸ್ಲಾಮಿಕ್ ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್.ಡಿ.ಪಿ.ಐ ಮತ್ತು ಪಾಪ್ಯುಲರ್ ಫ್ರಂಟ್‍ನಂತಹ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವಂತೆ ವಿಎಚ್‍ಪಿ ಆಗ್ರಹಿಸಿದೆ.