ಚೆನ್ನೈ: ಎಐಎಡಿಎಂಕೆಯು ತನ್ನ ಏಕೈಕ ಸಂಸದ ಒ.ಪಿ ರವೀಂದ್ರನಾಥ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಉಚ್ಚಾಟಿಸಿದೆ.
ಚೆನ್ನೈ: ಎಐಎಡಿಎಂಕೆಯು ತನ್ನ ಏಕೈಕ ಸಂಸದ ಒ.ಪಿ ರವೀಂದ್ರನಾಥ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಉಚ್ಚಾಟಿಸಿದೆ.
ಉಚ್ಚಾಟಿತ ನಾಯಕ ಒ ಪನ್ನೀರಸೆಲ್ವಂ ಅವರ ಮಗನಾದ ರವೀಂದ್ರನಾಥ್ ಅವರು 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದಿಂದ ಗೆದ್ದ ಏಕೈಕ ಅಭ್ಯರ್ಥಿಯಾಗಿದ್ದರು.
ಇದರ ಜತೆಗೆ, ಪನ್ನೀರಸೆಲ್ವಂ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಡಜನ್‌ಗೂ ಅಧಿಕ ನಾಯಕರು, ಮುಖಂಡರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪಕ್ಷದಿಂದ ಹೊರದಬ್ಬಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಅತ್ಯಂತ ಪ್ರಭಾವಿ ಸಮಿತಿಯಾದ 'ಜನರಲ್ ಕೌನ್ಸಿಲ್' (ಜಿ.ಸಿ) ಸೋಮವಾರ ನೇಮಿಸಿತು. ಅದರ ಬೆನ್ನಿಗೇ, ಪ್ರಮುಖ ಪ್ರತಿಸ್ಪರ್ಧಿ ಒ.ಪನ್ನೀರಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು.