HEALTH TIPS

ಮಗು ಗರ್ಭದಲ್ಲಿ ಇರುವಾಗಲೇ ದತ್ತು ತೆಗೆದುಕೊಳ್ಳಬಹುದಾ? ಹೈಕೋರ್ಟ್​ನಿಂದ ಹೊರಟಿದೆ ಮಹತ್ವದ ಆದೇಶ

           ಚಂಡೀಗಢ: ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಹಿಂದೂ ದತ್ತಕ ಕಾಯ್ದೆಯಲ್ಲಿ ಇದಾಗಲೇ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲಿ ಒಂದು ಗರ್ಭದಲ್ಲಿರುವಾಗಲೇ ಮಗುವನ್ನು ದತ್ತು ಪಡೆದುಕೊಳ್ಳುವುದು. ಹಲವಾರು ಮಂದಿ ಕೂಸು ಹುಟ್ಟುವ ಮೊದಲೇ ಈ ಮಗು ನನಗೆ ಸೇರಿದ್ದು ಎಂದು ಮಾತನಾಡಿಕೊಳ್ಳುವುದೂ ಅಲ್ಲದೇ, ಅದನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನೂ ಸೃಷ್ಟಿಸಿಕೊಳ್ಳುತ್ತಿದ್ದಾರೆ.

            ಆದರೆ ಇದು ಕಾನೂನುಬದ್ಧವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಗರ್ಭದಲ್ಲಿರುವ ಮಗುವನ್ನು ಯಾವುದೇ ಕಾರಣಕ್ಕೂ ದತ್ತು ತೆಗೆದುಕೊಳ್ಳುವಂತಿಲ್ಲ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಮಗುವನ್ನು ಗರ್ಭದಲ್ಲಿದ್ದಾಗಲೇ ದತ್ತು ಪಡೆಯುವಂತಿಲ್ಲ. ಇದು ಹಿಂದೂ ದತ್ತು ಸ್ವೀಕಾರ ಕಾಯ್ದೆಯ ವಿರುದ್ಧವಾಗಿದೆ ಎಂದು ಕೋರ್ಟ್​ ಹೇಳಿದೆ.

             ಗರ್ಭದಲ್ಲಿರುವ ಮಗು ದತ್ತು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಪಟಿಯಾಲಾದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​ ಈ ಆದೇಶ ಹೊರಡಿಸಿದೆ.

                           ಏನಿದು ಘಟನೆ?
           ಪಟಿಯಾಲಾದ ಮಹಿಳೆಯೊಬ್ಬರು ಗರ್ಭ ಧರಿಸಿದ್ದರು. ಆದರೆ ಕುಟುಂಬದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಇದ್ದ ಹಿನ್ನೆಲೆಯಲ್ಲಿ ಮಗು ತನಗೆ ಬೇಡ ಎಂದು ನಿರ್ಧರಿಸಿದ್ದರು. ಈ ಮಗುವನ್ನು ದತ್ತು ಪಡೆದುಕೊಳ್ಳಲು ದಂಪತಿಯೊಬ್ಬರು ಕೋರಿದ್ದರು. ಗರ್ಭ ಧರಿಸಿದ್ದ ಮಹಿಳೆ ಕೂಡ ಇದಕ್ಕೆ ಅನುಮತಿ ಕೊಟ್ಟಿದ್ದರು.

              ಆದರೆ ಮಗು ಹುಟ್ಟುತ್ತಲೇ ಈ ಅಮ್ಮನ ಮನಸ್ಸು ಬದಲಾಗಿದೆ. ತನ್ನ ಕರುಳ ಕುಡಿಯನ್ನು ನೋಡಿ ದತ್ತು ನೀಡದೇ ಇರಲು ತೀರ್ಮಾನಿದ್ದಾಳೆ. ಈ ತೀರ್ಮಾನಕ್ಕೆ ಬರುವ ಮೊದಲೇ ದತ್ತು ಪಡೆಯಲು ನಿರ್ಧರಿಸಿದ್ದ ದಂಪತಿ ಮಗುವನ್ನು ವಾಪಸ್​ ನೀಡಲಿಲ್ಲ. ಎಷ್ಟೇ ಕಾಡಿ ಬೇಡಿದರೂ ಅವರು ಅದನ್ನು ನೀಡಲಿಲ್ಲ.

             ಇದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್​ ಮೊರೆ ಹೋಗಿದ್ದರು. ಮಗು ಜನಿಸುವ ಮುನ್ನವೇ ದತ್ತು ಪಡೆಯಲಾಗಿದೆ. ಮಗುವಿನ ನೋಂದಾಯಿತ ಪತ್ರವೂ ಇಲ್ಲ. ಹೀಗಾಗಿ ಮಗುವನ್ನು ತನಗೆ ವಾಪಸ್​ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

           ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಇಂಥ ದತ್ತಕಕ್ಕೆ ಕಾನೂನಿನ ಅನುಮತಿ ಇಲ್ಲ. ಆದ್ದರಿಂದ ಇದು ಕಾನೂನು ಬಾಹಿರ ಎಂದು ಹೇಳಿದ್ದು, ಮಗುವನ್ನು ವಾಪಸ್​ ಕೊಡುವಂತೆ ದಂಪತಿಗೆ ಆದೇಶಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries