ನವದೆಹಲಿ: ಇತ್ತೀಚೆಗೆ ಒಬ್ಬರ ಹೆಸರಿನಲ್ಲಿ ನಾನಾ ಫೇಕ್ ಖಾತೆಗಳು ಟ್ವಿಟರ್ನಲ್ಲಿ ಕಂಡು ಬಂದಿದ್ದರೆ ಅದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರದ್ದೆನ್ನಬಹುದು. ಈ ಕುರಿತು ಆಗಾಗ ಬೇರೆ ಬೇರೆ ಫ್ಯಾಕ್ಟ್ಚೆಕ್ಗಳು ಬರುತ್ತಿದ್ದರೂ ಅಂಥ ಫೇಕ್ ಖಾತೆಗಳು ಕಂಡುಬರುತ್ತಲೇ ಇದ್ದು, ಅವುಗಳಿಗೆ ಸಾವಿರಾರು ಫಾಲೋವರ್ಸ್ ಕೂಡ ಇರುವುದು ಅಚ್ಚರಿ ಮೂಡಿಸಿದೆ.
ಇದೀಗ ಆ ಬಗ್ಗೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ಚೆಕ್ ಮಾಡಿ ಅಂಥದ್ದೇ ಒಂದು ಖಾತೆಯ ಬಗ್ಗೆ ಎಚ್ಚರಿಕೆ ನೀಡಿದೆ. ದ್ರೌಪದಿ ಮುರ್ಮು ಅವರ ಹೆಸರಿನಲ್ಲಿರುವ ಟ್ವಿಟರ್ ಖಾತೆಯೊಂದರ ಸ್ಕ್ರೀನ್ಶಾಟ್ ಹಂಚಿಕೊಂಡಿರುವ ಪಿಐಬಿ, ಅದು ಫೇಕ್ ಅಕೌಂಟ್ ಎಂಬುದನ್ನು ಸ್ಪಷ್ಟಪಡಿಸಿದೆ. ಅಂದಹಾಗೆ ಆ ಖಾತೆಗೆ 34 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ.
ಅದೇರೀತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ನಾನಾ ಫೇಕ್ ಅಕೌಂಟ್ಸ್ ಟ್ವಿಟರ್ನಲ್ಲಿದ್ದು, ಬಹುತೇಕ ಎಲ್ಲವೂ ಸಾವಿರಾರು ಫಾಲೋವರ್ಸ್ ಹೊಂದಿವೆ. ಸದ್ಯದ ಮಾಹಿತಿ ಪ್ರಕಾರ ದ್ರೌಪದಿ ಮರ್ಮು ಅವರ ಹೆಸರಿನಲ್ಲಿ ಯಾವುದೇ ವೈಯಕ್ತಿಕ ಖಾತೆ ಇಲ್ಲ. ಆದರೆ ಅವರನ್ನು ಫಾಲೋ ಮಾಡುವವರು ರಾಷ್ಟ್ರಪತಿಯ ಅಧಿಕೃತ ಖಾತೆ https://twitter.com/rashtrapatibhvn ಮೂಲಕ ಟ್ವಿಟರ್ನಲ್ಲಿ ಫಾಲೋ ಮಾಡಬಹುದು.