ನವದೆಹಲಿ: ಸ್ಪ್ರೈಟ್ ಎಂದಾಕ್ಷಣ ನೆನಪಾಗುವ ಹಸಿರು ಬಾಟಲಿ ಇನ್ನು ಕಾಣಸಿಗದು.
60 ವರ್ಷಗಳ ನಂತರ, ಸ್ಪ್ರೈಟ್ ಇನ್ನು ಮುಂದೆ ಹಸಿರು ಬಣ್ಣದಿಂದ ಬದಲಾಗಲಿದೆ. ಇನ್ನು ಪಾರದರ್ಶಕ ಬಾಟಲಿಯಲ್ಲಿ ಮಾರಾಟವಾಗಲಿದೆ. ಈ ನಿರ್ಧಾರದ ಹಿಂದಿನ ಗುರಿಯು ಹೆಚ್ಚು ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿಸುವುದು ಎಮದು ಹೇಳಲಾಗಿದ್ದು, ನಾಳೆಯಿಂದ ಮಾರುಕಟ್ಟೆಗೆ ಬರಲಿರುವ ಹೊಸ ಬಾಟಲಿಗಳಲ್ಲಿ ಈ ಬದಲಾವಣೆ ಕಂಡುಬರಲಿದೆ.
ಕಾರ್ಬೊನೇಟೆಡ್ ತಂಪು ಪಾನೀಯವಾದ ಸ್ಪ್ರೈಟ್ ಅನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ನಿಂದ ತಯಾರಿಸಲಾಗುತ್ತದೆ, ಇದು ಪ್ರಸ್ತುತ ಬಳಕೆಯಲ್ಲಿರುವ ಹಸಿರು ಬಾಟಲಿಯಾಗಿದೆ. ಬಳಕೆಯ ನಂತರ, ಈ ಬಾಟಲಿಗಳನ್ನು ಇನ್ನು ಬಟ್ಟೆ ಮತ್ತು ಕಾರ್ಪೆಟ್‍ಗಳಂತಹ ಬಿಸಾಡಬಹುದಾದ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಆದರೆ ಪಾರದರ್ಶಕ ಬಾಟಲಿಗಳನ್ನು ಮರುಬಳಕೆ ಮಾಡಬಹುದು ಮತ್ತು ಹೊಸ ಬಾಟಲಿಗಳಾಗಿ ಬಳಸಬಹುದು. ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮರುಬಳಕೆಯನ್ನು ಬೆಂಬಲಿಸುವುದು ಗುರಿಯಾಗಿದೆ ಎಂದು ಸ್ಪ್ರೈಟ್ ಬ್ರಾಂಡ್ ಮಾಲೀಕರಾದ ಕೊಕೊ ಕೋಲಾ ಕಂಪನಿ ಹೇಳಿದೆ.
ಇನ್ನು ಹಸಿರು ಬಾಟಲಿ ಇಲ್ಲ; ನಾಳೆಯಿಂದ ಹೊಸ ರೂಪದಲ್ಲಿ ಸ್ಪ್ರೈಟ್
0
ಜುಲೈ 31, 2022