ಕಾಸರಗೋಡು: ಬೆಂಗಳೂರಿನಲ್ಲಿ ನಡೆದ ಫಿಫಾ ಕಪ್ ಓಪನ್ ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಕೇರಳ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಚೆರ್ವತ್ತೂರಿನ ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ತಂಡ ಕೇರಳಕ್ಕೆ ಸ್ಪರ್ಧಿಸಿತ್ತು. ವಿವಿಧ ರಾಜ್ಯಗಳ ವಿವಿಧ ಕ್ಲಬ್‍ಗಳಿಂದ ಸುಮಾರು 700 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕ್ಯುರುಗಿ ಮತ್ತು ಪೂಮ್ಸಾ ವಿಭಾಗಗಳಲ್ಲಿ ಸಬ್ ಜೂನಿಯರ್-ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಚೆರ್ವತ್ತೂರು ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯಿಂದ ಮೂರು ತಿಂಗಳ ವಿಶೇಷ ಶಿಬಿರ ಮುಗಿಸಿ ಜುಲೈ 1ರಂದು ತಂಡ ತೆರಳಿತ್ತು. ಕೇರಳದಿಂದ 16 ಬಾಲಕರು ಮತ್ತು 5 ಬಾಲಕಿಯರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಪಂದ್ಯಾವಳಿಯ ನಿರ್ದೇಶಕ ಮಾಸ್ಟರ್ ವಿಫ ರವಿ ತಂಡಕ್ಕೆ ಸಮಗ್ರ ಟ್ರೋಫಿಯನ್ನು ಪ್ರದಾನ ಮಾಡಿದರು.
ಸುಮಾರು 42 ಪದಕಗಳನ್ನು ಗೆಲ್ಲುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದಾಗಿ ತಂಡದ ಮುಖ್ಯ ಕೋಚ್ ಅನಿಲ್ ಮಾಸ್ತರ್ ಚೆರ್ವವತ್ತೂರು, ವ್ಯವಸ್ಥಾಪಕ ಸನೇಶ್ ಅವಿಕಲ್ ಮತ್ತು ಸಂಯೋಜಕ ಮಹೇಂದ್ರನ್ ವಾಜವಳಪಿಲ್ ತಿಳಿಸಿದರು.