ನವದೆಹಲಿ: 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದ ನಂತರ ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಜನರ ಮನಸ್ಸಿನಲ್ಲಿ ಹೆಚ್ಚು ಪರಿಚಿತರಾದರು. ಅವುಗಳಲ್ಲಿ ದಶಕಗಳಿಂದ ಭಾರತೀಯರಿಗೆ ತಿಳಿದಿರುವ ಒಂದು ಮಹತ್ವದ ವ್ಯಕ್ತಿಯೂ ಇದ್ದಾರೆ. ಮಲೆಯಾಳಿ ಶೋಭಾ ತರೂರ್ ಬೇರೆ ಯಾರೂ ಅಲ್ಲ, ಅಮುಲ್ ನ ಜಾಹೀರಾತಿನಲ್ಲಿ ಕಂಡುಬಂದ ಬೆಣ್ಣೆ ಹಚ್ಚಿದ ಮುಖದ ಪುಟಾಣಿÂ ಎಂಬುದು ಬಹಳಷ್ಟು ಮಂದಿಗೂ ಗೊತ್ತಿರಲಾರದು.
ಸಂಸದ ಶಶಿ ತರೂರ್ ಅವರ ಸಹೋದರಿಯೂ ಆಗಿರುವ ಶೋಭಾ ಅವರು ಅತ್ಯುತ್ತಮ ಧ್ವನಿಗಿರುವ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಶೋಭಾ ಅಮೆರಿಕ ಮೂಲದ ವಕೀಲೆ, ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ.
ಕೇರಳ ಪ್ರವಾಸೋದ್ಯಮಕ್ಕಾಗಿ ಇನ್ವಿಸ್ ಮಲ್ಟಿಮೀಡಿಯಾ ನಿರ್ಮಿಸಿದ ಮತ್ತು ಸಿರಾಜ್ μÁ ನಿರ್ದೇಶಿಸಿದ ಕೇರಳದ ರೈನ್ಸ್-ಮಾನ್ಸೂನ್ಸ್ ಸಾಕ್ಷ್ಯಚಿತ್ರ ರಾಪೆÇ್ಸೀಡಿಗಾಗಿ ಶೋಭಾ ಅವರು ಪ್ರಶಸ್ತಿ ಪಡೆದರು.
ಶೋಭಾ ತರೂರ್ ತನ್ನ ತಂದೆ ಚಂದ್ರನ್ ತರೂರ್ ಅವರ ಸ್ನೇಹಿತ ಮತ್ತು ಪ್ರಮುಖ ಜಾಹೀರಾತು ಏಜೆನ್ಸಿಯ ಮಾಲೀಕ ಸಿಲ್ವೆಸ್ಟರ್ ಕುನ್ಹಾ ಮೂಲಕ ಅಮುಲ್ ನ ಬ್ರಾಂಡ್ ಅಂಬಾಸಿಡರ್ ಆದವರು. ನಂತರ, ಶೋಭಾ ಅವರ ತಂಗಿ ಸ್ಮಿತಾ ತರೂರ್ ಅಮುಲ್ ನ ಮೊದಲ ಕಲರ್‍ಫುಲ್ ಬೇಬಿ ಆದರು.
ಎರಡನೆ ವಯಸ್ಸಲ್ಲಿ ಅಮುಲ್ ನ ಮುಖವಾದ ಪುಟಾಣಿ ಬೆಡಗಿ ಯಾರುಗೊತ್ತಾ?: ಇಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ; ಶಶಿ ತರೂರ್ ಸಹೋದರಿ
0
ಜುಲೈ 26, 2022