ಮಂಜೇಶ್ವರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯ ನೋಂದಾವಣಾ ಶಿಬಿರ ವರ್ಕಾಡಿ ಸನಿಹದ ಮುರತ್ತಣೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್‍ನಲ್ಲಿ ಜರುಗಿತು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಶಿಬಿರ ಉದ್ಘಾಟಿಸಿದರು.ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆಮ ಬ್ಲಾಕ್ ಪಂಚಾಯಿತಿ ಸದಸ್ಯೆಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದ್ದರು. ಕೋಳ್ಯೂರ್ ವಾರ್ಡು ಸಮಿತಿ ಅಧ್ಯಕ್ಷ ನಾರಾಯಣ ತುಂಗೆರ್, ಶಿವಶಕ್ತಿ ಕ್ಲಬ್ ಅಧ್ಯಕ್ಷ ರಘು ಮುರತ್ತಣೆ, ಸದಾಶಿವ ವರ್ಕಾಡಿ, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.
ರಕ್ಷÀಣ್ ಪರಿವಾರ್ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.
ಉದುಮದಲ್ಲಿ ಹೆಲ್ಪ್ ಡೆಸ್ಕ್:
ಕಾಂಗ್ರೆಸ್ ಮತ್ತು ಎಡರಂಗದ ಅಂಧತ್ವದಿಂದ ಕೂಡಿದ ಮೋದಿ ವಿರೋಧಿ ಧೋರಣೆ ಕೇಂದ್ರ ಸರ್ಕಾರ ಜಾರಿಗೊಳಿಸುವ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಗೆ ತಡೆಯುಂಟುಮಾಡಲು ಯತ್ನಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಬಿಜೆಪಿ ಉದುಮ ಪಂಚಾಯಿತಿ ಸಮಿತಿ ಕಚೇರಿಯಲ್ಲಿ ಯುವಮೋರ್ಚಾ ಆಯೋಜಿಸಿದ್ದ ಅಗ್ನಿಪಥ್ ಹೆಲ್ಪ್ ಡೆಸ್ಕ್ ಉದ್ಘಾಟಿಸಿ ಮಾತನಾಡಿದರು. ಲಕ್ಷಾಂತರ ಮಂದಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವ ಮಧ್ಯೆ ಸಿಪಿಎಂ ತನ್ನ ಕಾರ್ಯಕರ್ತರಿಗೆ ತಾತ್ಕಾಲಿಕ ಉದ್ಯೋಗ ಕೊಡಿಸಿ ಕೈಚೆಲ್ಲುತ್ತಿದ್ದು, ಎರಡೂ ರಂಗಗಳು ತಮ್ಮ ವೈಫಲ್ಯ ಮುಚ್ಚಿಹಾಕಲು ಅಗ್ನಿಪಥ್ ಯೋಜನೆಯನ್ನು ಎದುರಿಸುತ್ತಿರುವುದಾಗಿ ದೂರಿದರು. ಉದುಮ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಮಧುಸೂದನನ್ ಅಡ್ಕತ್ತಬೈಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎನ್. ಬಾಭುರಾಜ್, ವೈ. ಕೃಷ್ಣದಾಸ್, ತಂಬಾನ್ ಅಚ್ಚೇರಿ, ಶ್ಯಾಂ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.