ಮಂಜೇಶ್ವರ: ಸದ್ದಿಲದೆ ವಿದ್ಯುತ್ ದರ ಏರಿಕೆ ಮಾಡಿರುವ ಕೇರಳ ಸರ್ಕಾರ ಜನತೆಯ ದುಡ್ಡಿನಲ್ಲಿ ಜನತೆಯನ್ನೇ ವಂಚಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಅದರಲ್ಲಿ ಕೃಷಿಕರಿಗೆ , ಕೈಗಾರಿಕೆಗಳಿಗೆ ಅನುದಾನ ಇಲ್ಲವಾಗಿಸಿರುವುದು ಜನ ದ್ರೋಹನೀತಿಯಾಗಿದೆ. ವಿವಿಧ ವಿಭಾಗಗಳಿಗೆ ಪ್ರತ್ಯೇಕ ಪ್ರತ್ಯೇಕ ದರ ಜನತೆಯನ್ನು ವಂಚಿಸಲು ರೂಪಿಸಿರುವ ಸಂಚಾಗಿದೆ ಎಂದಿದೆ.
ಕೇಂದ್ರ ಸರ್ಕಾರದ ದಿನ್ ದಯಾಳ್ ಉಜ್ವಲ ಯೋಜನೆಯ ಅನುದಾನದಲ್ಲಿ ನೂತನ ಟ್ರಾನ್ಸ್ಫಾರ್ಮರ್, ನೂತನ ಎತ್ತರದ ಕಂಬಗಳ ಜೋಡಣೆ, ಎಲ್ ಇ ಡಿ ಲೈಟ್ ಗಳ ಅಳವಡಿಕೆ, ಬಿಪಿಎಲ್ ಕುಟುಂಬಕ್ಕೆ ಉಚಿತ ಕಾನೆಕ್ಟಿವ್ ಕೇಂದ್ರದ ನೆರವಿನಿಂದ ಮಾಡುವುದನ್ನು ತನ್ನದೆಂದು ಬಿಂಬಿಸಲು ಹೋರಾಲ್ನಡೆಯುತ್ತಿದೆ. ರಾಜ್ಯ ಸರ್ಕಾರ ಸದ್ದಿಲದೆ ವಿದ್ಯುತ್ ದರ ಏರಿಕೆ ಖಂಡನೀಯ ಎಂದು ಬಿಜೆಪಿ ದೂರಿದೆ.
ಈ ಬಗ್ಗೆ ಹೊಸಂಗಡಿಯಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ವಿಜಯ್ ರೈ, ಮನುಲಾಲ್ ಮೇಲೋತ್, ಆದರ್ಶ್ ಬಿಎಂ, ಅಶ್ವಿನಿ ಪಜ್ವ, ಚಂದ್ರಶೇಖರ್, ಶಂಕರ್ ನಾರಾಯಣ ಮುಂದಿಲ, ಆಶಾಲತ ಪೇಲಪಡಿ, ಯಾದವ ಬಡಾಜೆ, ಹರಿಶ್ಚಂದ್ರ ಎಂ, ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು, ಸುಬ್ರಹ್ಮಣ್ಯ ಭಟ್ ಆಟಿ ಕುಕ್ಕೆ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.