ಕಾಸರಗೋಡು: ಜಿಲ್ಲೆಯ ವಿವಿಧೆಡೆ ಬಿಎಂಎಸ್ ಸ್ಥಾಪನಾ ದಿನಾಚರಣೆ ನಡೆಯಿತು. ಬಿಎಂಎಸ್ ಕುದ್ರೆಪ್ಪಾಡಿ ಘಟಕ ವತಿಯಿಂದ ಸ್ಥಾಪನಾ ದಿನಾಚರಣೆ ಅಂಗವಾಗಿ ಆರೆಸ್ಸೆಸ್ ಮುಖಂಡ ಸುನಿಲ್ ಮಾಯಿಪ್ಪಾಡಿ ಧ್ವಜಾರೋಹಣ ನಡೆಸಿದರು. ಈ ಸಂದರ್ಭ ಬಿಎಂಎಸ್ ಕಾರ್ಯಕರ್ತರು ಮಾಯಿಪ್ಪಾಡಿ ಹೆಲ್ತ್ ಸೆಂಟರ್ ಹಾಗೂ ಆಸುಪಾಸು ಶುಚೀಕರಣ ಕಾರ್ಯ ನಡೆಸಿಕೊಟ್ಟರು. ಬಿಜೆಂಎಸ್ ಜಿಲ್ಲಾ ಜತೆಕಾರ್ಯದರ್ಶಿ ಹರೀಶ್, ಗುರುದಾಸ್, ದಿಲೀಪ್ ಡಿ.ಸೋಜ, ಪುನೀತ್ ಮಾನ್ಯ, ದೀಕ್ಷಿತ್ ನಾಯ್ಕಾಪು, ಲೋಕೇಶ್ ಬಾಡೂರು, ಅಜಿತ್ ಕುದ್ರೆಪ್ಪಾಡಿ. ರಾಜೇಶ್ ಕುದ್ರೆಪ್ಪಾಡಿ ಮುಂತಾದವರು ನೇತೃತ್ವ ನೀಡಿದರು.
ಎಡನೀರಿನಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಬಿಎಂಎಸ್ ಚೆಂಗಳ ಪಂಚಾಯಿತಿ ಸಮಿತಿ ಅಧ್ಯಕ್ಷ ಬಾಬು ಮೋನ್ ಧ್ವಜಾರೋಹಣ ನಡೆಸಿದರು. ಮೊಗ್ರಾಲ್‍ಪುತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಚೌಕಿ ಆಟೋ ಸ್ಟಾಂಡ್ ಬಿಎಂಎಸ್ ಉಪಾಧ್ಯಕ್ಷ ಉದಯಕುಮಾರ್ ಧ್ವಜಾರೋಹಣ ನಡೆಸಿದರು. ಬಿಎಂಎಸ್ ಪೈವಳಿಕೆ ಪಂಚಾಯಿತಿಯ ಪೆರ್ಮುದೆಯಲ್ಲಿ ನಡೆದ ಸಮಾರಂಭದಲ್ಲಿ ಯೂನಿಟ್ ಕಾರ್ಯದರ್ಶಿ ಪ್ರಮೋದ್ ಕುಂಡೇರಿ ಧ್ವಜಾರೋಹಣ ನಡೆಸಿದರು.
ಬಿಎಂಎಸ್ ಸಂಸ್ಥಾಪನಾ ದಿನಾಚರಣೆ: ವಿವಿಧೆಡೆ ಧ್ವಜಾರೋಹಣ, ಶುಚೀಕರಣ ಕಾರ್ಯಕ್ರಮ
0
ಜುಲೈ 25, 2022