ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಒಂದರಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ರಾಷ್ಟ್ರಧ್ವಜ, ಸ್ವಾತಂತ್ರ್ಯವೀರರ ಭಾವಚಿತ್ರ ರಚನೆ ಸ್ಪರ್ಧೆನಡೆಯಲಿದೆ.
ರಾಷ್ಟ್ರಭಕ್ತಿ ಕುರಿತಾದ ಲೇಖನ ಮತ್ತು ಕವನ ರಚನಾ ಸ್ಪರ್ಧೆಯನ್ನು ಆರರಿಂದ ಹತ್ತನೇ ತರಗತಿ ವರೆಗೆ ಜ್ಯೂನಿಯರ್ ವಿಭಾಗ ಹಾಗೂ ಇದಕ್ಕಿಂತ ಮೇಲ್ಪಟ್ಟವರಿಗೆ ಸಾರ್ವಜನಿಕ ಸೀನಿಯರ್ ವಿಭಾಗ ಮಟ್ಟದಲ್ಲಿ ಸ್ಪರ್ಧೆ ನಡೆಯುವುದು. ಕವನ 25ಸಾಲು ಹಾಗೂ ಲೇಖನ 4ಪುಟಗಳನ್ನು ಮೀರಬಾರದು. ಚಿತ್ರ, ಕವನ, ಲೇಖನಗಳನ್ನು ಅಂಚೆ ಅಥವ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕಾಗಿದೆ. ವಾಟ್ಸಪ್ ಮೂಲಕ ವಾಮನ ರಾವ್ ಬೇಕಲ್-9633073400, ಅಂಚೆ ಮೂಲಕ ಸೀತಮ್ಮ ಪುರುಷ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ನುಳ್ಳಿಪ್ಪಾಡಿ, ಕಾಸರಗೋಡು-671121 ಎಂಬ ವಿಳಾಸಕ್ಕೆ ಆ. 10ರ ಮುಂಚಿತವಾಗಿ ಕಳುಹಿಸಿಕೊಡಬೇಕು. ಫಲಿತಾಂಶ ಆ. 14ರಂದು ಪ್ರಕಟಗೊಳ್ಳಲಿದ್ದು, ವಿಜೇತರಿಗೆ ಪ್ರಥಮಮ ದ್ವಿತೀಯ ಹಾಗೂ ತೃತೀಯ ಬಹುಮಾಮದೊಂದಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ವಿವಿಧ ಸ್ಪರ್ಧೆಗಳು
0
ಜುಲೈ 31, 2022