HEALTH TIPS

ಸಾಜಿ ಚೆರಿಯನ್ ಅವರ ಖಾತೆ ಮೂವರಿಗೆ ಹಂಚಿಕೆ: ರಾಜ್ಯಪಾಲರಿಂದ ಅಂಗೀಕಾರ

                 ತಿರುವನಂತಪುರ: ಸಂವಿಧಾನವನ್ನು ಉಲ್ಲಂಘಿಸಿದ್ದರ ಪರಿಣಾಮ ರಾಜೀನಾಮೆ ನೀಡಿದ ಸಾಜಿ ಚೆರಿಯನ್ ಅವರ ಖಾತೆಗಳನ್ನು ಇತರ ಸಚಿವರಿಗೆ ಹಸ್ತಾಂತರಿಸಲಾಗಿದೆ. ಸಾಜಿ ಚೆರಿಯನ್ ಸಂಸ್ಕøತಿ,  ಮೀನುಗಾರಿಕೆ ಇಲಾಖೆಗಳನ್ನು ನಿರ್ವಹಿಸುತ್ತಿದ್ದರು. ವಿ.ಅಬ್ದುಲ್ ರಹಮಾನ್, ಪಿ.ಎ.ಮಹಮ್ಮದ್ ರಿಯಾಝ್ ಮತ್ತು ವಿ.ಎನ್.ವಾಸವನ್ ಅವರಿಗೆ ಇಲಾಖೆಗಳನ್ನು ಹಸ್ತಾಂತರಿಸಲಾಯಿತು.

                    ಅಬ್ದುಲ್ ರೆಹಮಾನ್ ಅವರಿಗೆ ಮೀನುಗಾರಿಕೆ, ಹಾರ್ಬರ್ ಎಂಜಿನಿಯರಿಂಗ್ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ವಿಭಾಗಗಳನ್ನು ನೀಡಲಾಗಿದೆ.  ವಿ.ಎನ್.ವಾಸವನ್ ಅವರಿಗೆ ಸಾಂಸ್ಕೃತಿಕ ಮತ್ತು ಸಿನಿಮಾ- ಚಲಚ್ಚಿತ್ರ ಅಕಾಡೆಮಿ ಗಳನ್ನು ಹಂಚಿಕೆ ಮಾಡಲಾಗಿದೆ. ಮುಹಮ್ಮದ್ ರಿಯಾಝ್ ಅವರಿಗೆ ಯುವಕಾರ್ಯ ಖಾತೆ ನೀಡಲಾಗಿದೆ.  ಈ ಸಂಬಂಧ ಮುಖ್ಯಮಂತ್ರಿಗಳ ಶಿಫಾರಸು ಪತ್ರವನ್ನು ರಾಜಭವನಕ್ಕೆ ರವಾನಿಸಲಾಗಿದೆ. ಮುಖ್ಯಮಂತ್ರಿಗಳ ಶಿಫಾರಸನ್ನು ರಾಜ್ಯಪಾಲರು ಅಂಗೀಕರಿಸಿದ ಬಳಿಕ ಇಲಾಖೆ ಬದಲಾವಣೆ ಪೂರ್ಣಗೊಳ್ಳಲಿದೆ.  ಇದರೊಂದಿಗೆ ಸದ್ಯಕ್ಕೆ ಸಚಿವ ಸಂಪುಟದಲ್ಲಿ ಸಾಜಿ ಚೆರಿಯನ್ನು ಅವರನ್ನು ಮತ್ತೆ ಸೇರಿಸುವ ಸಾಧ್ಯತೆ ಇಲ್ಲವೆಂಬುದು ಖಚಿತವಾಗಿದೆ.

                 ಸಾಜಿ ಚೆರಿ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಭಾರತೀಯ ಸಂವಿಧಾನವು ಜನರನ್ನು ಲೂಟಿ ಮಾಡಲು ಎಡೆಮಾಡುತ್ತಿದೆ ಎಂದು ಆರೋಪಿಸಿದ್ದರು. ಸಂವಿಧಾನವು ಕಾರ್ಮಿಕರ ಶೋಷಣೆಗೆ ಅನುಕೂಲ ಕಲ್ಪಿಸಿದೆ. ದೇಶದ ಸಂವಿಧಾನ ಕಾರ್ಮಿಕರಿಗೆ ರಕ್ಷಣೆ ನೀಡಿಲ್ಲ. ಇಂದು ಕೈಗೆಟಕುವವನೇ ಉದ್ಯಮಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರವೂ ಈ ಪ್ರಕ್ರಿಯೆಗೆ ಒಲವು ತೋರುತ್ತಿದೆ. ಬಹುಸಂಖ್ಯಾತರು ತುಳಿತಕ್ಕೆ ಎಳಸಲು ಎಡೆಮಾಡಿದೆ. ಆರ್ಥಿಕ ನೀತಿಗಳನ್ನು ಸರ್ಕಾರವು ರಕ್ಷಿಸುತ್ತದೆ. ಭಾರತವು ಜನರ ಅತ್ಯಂತ ಲೂಟಿ ಮಾಡಬಹುದಾದ ಸಂವಿಧಾನವನ್ನು ಹೊಂದಿದೆ ಎಂದಿದ್ದರು.

            ಜಾತ್ಯತೀತತೆ, ಪ್ರಜಾಪ್ರಭುತ್ವ, ರಕ್ಷಕಗಳೆಂದು ಬರೆದಿದ್ದರೂ ಇದು ಜನರ ವಿರುದ್ಧವಾಗಿದೆ. ಇದು ಸಂವಿಧಾನದ ವಿರುದ್ಧ ಚೆರಿಯಾನದ ಮಾಡಿದ ವಿಮರ್ಶೆಗಳಾಗಿದ್ದವು. ನ್ಯಾಯಾಲಯವನ್ನೂ ತೀವ್ರವಾಗಿ ಟೀಕಿಸಿದ್ದರು. ಕಾರ್ಮಿಕರು ಮುಷ್ಕರ ಮಾಡಿದರೆ, ನ್ಯಾಯಾಲಯಗಳು ಅವರ ವಿರುದ್ಧ ಟೀಕೆಗಳನ್ನು ಮಾಡುತ್ತವೆ. ಕಾರ್ಮಿಕರು ದೂರು ಸಲ್ಲಿಸಿದರೆ ಮೇಲಧಿಕಾರಿಗಳ ಪರವಾಗಿ ತೀರ್ಪು ನೀಡುವ ನ್ಯಾಯಾಂಗ ವ್ಯವಸ್ಥೆ ಭಾರತದಲ್ಲಿದೆ ಎಂದು ಆರೋಪಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries