ಕುಂಬಳೆ: ಸ್ವಸಹಾಯ ಸಂಘಟನೆಗಳ ಅನಂತಪುರ, ಪೆರ್ಣೆ, ನಾಯ್ಕಾಪು, ಸಿದ್ದಿಬೈಲು, ಹಾಗೂ ಕಣ್ಣೂರು ಒಕ್ಕೂಟಗಳ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಮಂತ್ರಣ ಪತ್ರಿಕೆ ಅನಂತಪುರ ಅನಂತ ಶ್ರೀ ಸಭಾ ಭವನದಲ್ಲಿ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ಟ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಜಯಶ್ರೀ ಶ್ರೀ ಕೃಷ್ಣಯ್ಯ ಅನಂತಪುರ, ಉಪಾದ್ಯಕ್ಷೆ ವಿನೋದ ರಾಜಶೇಖರ ಅನಂತಪುರ, ಪ್ರಧಾನ ಕಾರ್ಯದರ್ಶಿ ಹರಿಣಿ ಜಿ ಕೆ ನಾಯ್ಕ್ ಪೆರ್ಣೆ, ಪ್ರಧಾನ ಖಜಾಂಜಿ ಜಯಲಕ್ಷ್ಮೀ ಅನಂತಪುರ, ಸುಜಾತ ಪೆರ್ಣೆ, ಸವಿತಾ ಪೆರ್ಣೆ ನೇತೃತ್ವ ವಹಿಸಿದ್ದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ, ನ್ಯಾಯವಾದಿ ಉದಯಕುಮಾರ್ ಗಟ್ಟಿ, ಪಂಚಾಯತಿ ಸದಸ್ಯ ಜನಾರ್ದನ ಕಣ್ಣೂರು, ಮಾಧವ ಕಾರಂತ, ಚಂದ್ರಶೇಖರ ಅನಂತಪುರ, ರವೀಂದ್ರ ಆಳ್ ಕಣ್ಣೂರು, ಕುಶಾಲಪ್ಪ ಕಣ್ಣೂರು, ವಿಜಯ ಅನಂತಪುರ, ರತ್ನಾಕರ ಅನಂತಪುರ, ಸತ್ಯ ಶಂಕರ ಅನಂತಪುರ, ಉದಯ ಪೆರ್ಣೆ, ರಾಘವನ್ ನಾಯರ್, ರಾಮಚಂದ್ರ ಮಾಸ್ತರ್ ಮದನಗುಳಿ, ಅಪ್ಪಣ್ಣ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದರು.