ಕಾಸರಗೋಡು: ಸರ್ಕಾರಿ ಕಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೇದಾವತೀ ಎಸ್. ಅವರಿಗೆ ಕಣ್ಣೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರು ಡಾ. ಯು. ಮಹೇಶ್ವರೀ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಮಂಡಿಸಿದ 'ನವೋತ್ತರ ಕನ್ನಡ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಸ್ಮಿತೆಯ ಪ್ರತಿನಿಧಿತ್ವ' ಎಂಬ ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಇವರು ಉಪ್ಪಳ ಗೇಟ್ ನಿವಾಸಿ ಸಂಕಪ್ಪ ಕುಲಾಲ್-ವಸಂತಿ ದಂಪತಿ ಪುತ್ರಿ ಹಾಗೂ ಮಂಜೇಶ್ವರ ಮತ್ತು ಕಾಸರಗೋಡು ಸರ್ಕಾರಿ ಕಾಲೇಜುಗಳ ಹಳೇ ವಿದ್ಯಾರ್ಥಿ.