ಸಿಯೋನಿ: ಸರ್ಕಾರಿ ಶಾಲೆಯೊಂದರ ಬುಡಕಟ್ಟು ವಿದ್ಯಾರ್ಥಿಗಳು ಸೋರುತ್ತಿರುವ ಕಟ್ಟಡದ ಮೇಲ್ಛಾವಣಿ ಅಡಿಯಲ್ಲಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಇದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆ ಮತ್ತು ಮಕ್ಕಳ ಪರಿಸ್ಥಿತಿ. ಟ್ರೈಬಲ್ ಆರ್ಮಿ ಎಂಬ ಹೆಸರಿನ ಜನಪ್ರಿಯ ಬುಡಕಟ್ಟು ಹಕ್ಕುಗಳ ವಕಾಲತ್ತು ಖಾತೆಯು ಟ್ವಿಟ್ಟರ್ ಈ ವಿಡಿಯೋ ಶೇರ್ ಮಾಡಿದೆ.
ಈ ವೀಡಿಯೊ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬುಡಕಟ್ಟು ಪ್ರಾಬಲ್ಯದ ಖೈರಿಕಲಾ ಗ್ರಾಮದ ಪ್ರಾಥಮಿಕ ಶಾಲೆ. ಇಲ್ಲಿ ವಿದ್ಯಾರ್ಥಿಗಳು ಮಳೆನೀರು ಮೇಲ್ಛಾವಣಿಯಿಂದ ಬೀಳದಂತೆ ಶಾಲೆಯೊಳಗೆ ಛತ್ರಿ ಹಿಡಿದು ಪಾಠ ಕೇಳುವುದನ್ನು ಕಾಣಬಹುದು. ಶಿವರಾಜ್ ಚೌಹಾಣ್ ತನ್ನ ಮಗುವನ್ನು ವಿದೇಶಕ್ಕೆ ಓದಲು ಕಳುಹಿಸುತ್ತಾನೆ. ಇದು ಬಡ ಬುಡಕಟ್ಟು ಮಕ್ಕಳ ಸ್ಥಿತಿ ಎಂದು ಬರಹದಡಿ ವಿಡಿಯೋ ಶೇರ್ ಮಾಡಿದ್ದಾರೆ.https://twitter.com/i/status/1551969189878829058