ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಮತ್ತು ಇತರ ಜಲಮೂಲಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಜುಲೈ 6 ಬುಧವಾರ) ಕಾಸರಗೋಡು ಜಿಲ್ಲೆಯ ಅಂಗನವಾಡಿಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಕಾಲೇಜುಗಳಿಗೆ ರಜೆ ಅನ್ವಯಿಸುವುದಿಲ್ಲ
ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ರಜೆಯಿಂದಾಗಿ ಕಳೆದುಹೋದ ಅಧ್ಯಯನ ಸಮಯವನ್ನು ಮುಂದೆ ಸರಿಹೊಂದಿಸಲು ಕ್ರಮಕೈಗೊಳ್ಲ್ಳಲು ಸೂಚಿಸಲಾಗಿದೆ.
ಅತಿ ಜಾಗ್ರತೆ ಸೂಚನೆ:
ಈ ಮಧ್ಯೆ ಮಳೆಯ ಅನಾಹುತಗಳಿಂದ ಪಾರಾಗಲು ಅತಿ ಜಾಗ್ರತೆಗೆ ವಿಪತ್ತು ನಿರ್ವಹಣಾ ತಂಡ ನಿರ್ದೇಶನ ನೀಡಿದೆ. ಪುಟಾಣಿ ಮಕ್ಕಳು ಮನೆಯಿಂದ ಹೊರಗಿಳಿಯದಂತೆ ಸೂಚಿಸಲಾಗಿದೆ. ಬಿದ್ದ ವಿದ್ಯುತ್ ತಂತಿ, ಕೆರೆ ಹಳ್ಳಗಳ ನೀರ ಸೆಳೆತ, ಮರಗಳ ಅಡಿಯಲ್ಲಿ ನಿಲ್ಲುವುದು ಮೊದಲಾದ ಸಾಹಸಗಳಿಗೆ ಎಳಸದಂತೆ ಜಾಗ್ರತೆಗೆ ಸೂಚಿಸಲಾಗಿದೆ.