ಮುಳ್ಳೇರಿಯ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಶಕ್ತಿ ಜ್ಞಾನ ವಿಕಾಸ ಕೇಂದ್ರ ಮಲ್ಲಾವರ ಇದರ ವತಿಯಿಂದ " ಆಟಿಡೊಂಜಿ ದಿನ "ಕಾರ್ಯಕ್ರಮವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಕಾರ್ಯಕ್ರಮವನ್ನು ಆದೂರು ಸರ್ಕಾರಿ ಶಾಲಾ ಅಧ್ಯಾಪಿಕೆ ವನಜಾ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆμÁಢ ಮಾಸದ ಬಗ್ಗೆ ಮಾಹಿತಿಯನ್ನು ನೀಡಿದರು.
ಕೇರಳಾ ತುಳು ಅಕಾಡಮಿ ಸದಸ್ಯ ರವೀಂದ್ರ ರೈ ಮಲ್ಲಾವರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಟಿ ತಿಂಗಳ ಆಚಾರ-ವಿಚಾರಗಳ ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ಯೋಜನೆಯ ಮುಳ್ಳೇರಿಯ ವಲಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಲೆಕ್ಕ ಪರಿಶೋಧಕ ಬಾಲಕೃಷ್ಣ ಪಾಟಾಳಿ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿಣಿ ಸಂಗೀತ, ಸೇವಾ ಪ್ರತಿನಿಧಿ ಚಂದ್ರಕಲಾ ಮೊದಲಾದವರು ಶುಭ ಹಾರೈಸಿದರು. ವಲಯ ಉಪಾಧ್ಯಕ್ಷೆ ಹೇಮಲತಾ ಅಧಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಜನಿ ವರದಿ ವಾಚಿಸಿದರು. ಭಾಸ್ಕರ ಕುಂಡಲ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಚನಾ ಕುಂಡಲ ಸ್ವಾಗತಿಸಿ, ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ರೈ ಮಲ್ಲಾವರ, ಪುರುμÉೂೀತ್ತಮ ರಾವ್ ಸೋಡಿಪಟ್ಟೆ, ಯೋಗೀಶ್ ರೈ ಮಲ್ಲಾವರ ಸಹಕರಿಸಿದರು. ಸಮಾರಂಭದ ಮಧ್ಯೆ ಆಗಮಿಸಿದ ಆಟಿ ತಿಂಗಳ ಬೇಡನ ನೃತ್ತ ಸಮಾರಂಭಕ್ಕೆ ಮತ್ತಷ್ಟು ಮೆರುಗನ್ನು ನೀಡಿ ಭಕ್ತಿಯ ಸಂಚಲನವನ್ನುಂಟು ಮಾಡಿತು. ಸುಮಾರು 65 ಬಗೆಯ ರುಚಿಯಾದ ತಿಂಡಿ ತಿನಿಸುಗಳ ಸವಿಯೊಂದಿಗೆ ಆಟಿ ತಿಂಗಳ ನೆನಪನ್ನ ಮೆಲುಕು ಹಾಕುವಂತೆ ಮಾಡಿತು.
ಗ್ರಾಮಾಭಿವೃದ್ದಿ ಯೋಜನೆಯಿಂದ ಆಟಿಟೊಂಜಿ ದಿನ ಆಚರಣೆ
0
ಜುಲೈ 29, 2022