ಲಖನೌ: ಲಖನೌ ಕೆಲವು ವಾರಗಳಿಂದ ವಿವಾದದ ಕೇಂದ್ರ ಬಿಂದುವಾಗಿದೆ. ಲುಲು ಮಾಲ್ ನೊಳಗೆ ಜನರು ಪ್ರಾರ್ಥನೆ ಸಲ್ಲಿಸುತ್ತಿರುವ ವೈರಲ್ ವೀಡಿಯೊದಿಂದ ಹಿಡಿದು ಸಾಕಷ್ಟು ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಇದೀಗ ಪಬ್ ನ ಮುಂದೆ ನಡೆದ ಜಗಳದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬೆಚ್ಚಿ ಬೀಳುವಂತೆ ಮಾಡಿದೆ.
ವಿಭೂತಿಖಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಲಖನೌದ ಅನ್‌ಪ್ಲಗ್ಡ್ ಕೆಫೆಯಲ್ಲಿ ಈ ಘಟನೆ ನಡೆದಿದೆ. ಕ್ಲಿಪ್‌ನಲ್ಲಿ, ಇಬ್ಬರು ಮಹಿಳೆಯರು ಪಬ್ ನ ಮುಂದೆ ಪುರುಷನನ್ನು ಥಳಿಸುವುದು ಕಂಡುಬರುತ್ತದೆ.
ಪುರುಷನು ಮಾತನಾಡಲು ಪ್ರಯತ್ನಿಸುತ್ತಿರುವಾಗ, ಒಬ್ಬ ಮಹಿಳೆ ಹೂವಿನ ಕುಂಡವನ್ನು ಎತ್ತಿಕೊಂಡು ಪುರುಷನ ಬೆನ್ನಿನ ಹಿಂದೆ ಓಡುವುದನ್ನು ಕಾಣಬಹುದು.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪಕ್ಕದಲ್ಲಿ ನಿಂತಿದ್ದ ಬೌನ್ಸರ್ ಗಳು ಮಧ್ಯಪ್ರವೇಶಿಸಿ ಹೊಡೆದಾಟವನ್ನು ತಡೆಗಟ್ಟಿದರು.
https://twitter.com/IndiaObservers?s=20&t=31hBIf6TRqG0-h0EEf3S6w