ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಪಟ್ಟಾಜೆ ವಾರ್ಡು ಉಪ ಚುನಾವಣೆಯಲ್ಲಿ ಸ್ಪರ್ದಿಸುವ ಬಿಜೆಪಿ ಅಭ್ಯರ್ಥಿ ಮಹೇಶ ವಳಕುಂಜ ಅವರು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅನಂತರ ಅವರು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಪಟ್ಟಾಜೆ ವಾರ್ಡು ಚುನಾವಣಾ ಸಮಿತಿ ಸಂಚಾಲಕ ವೆಂಕಪ್ಪ ನಾಯ್ಕ ಮಾನ್ಯ, ವೆಂಕಟ್ರಮಣ ಚುಕ್ಕಿನಡ್ಕ, ಬ್ಲಾಕ್ ಪಂಚಾಯತು ಸದಸ್ಯೆ ಅಶ್ವಿನಿ ಮೊಳೆಯಾರು ಸಹಿತ ಹಲವರು ಉಪಸ್ಥಿತರಿದ್ದರು.