ಕೋಝಿಕ್ಕೋಡ್: ಕೋಝಿಕ್ಕೋಡ್ ಸಹಿತ ಕೆಲವು ಜಿಲ್ಲೆಗಳಲ್ಲಿ ಡ್ರಗ್ ಮಾಫಿಯಾ ಕಡಿಮೆ ಬೆಲೆಗೆ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2000 ರೂ.ವಿಗೆ ಮಾರಾಟವಾಗುತ್ತಿದ್ದ ಎಂಡಿಎಂಎ ಈಗ ಪ್ರತಿ ಗ್ರಾಂಗೆ 1000 ರೂ.ಗೆ ಮಾರಾಟವಾಗುತ್ತಿದೆ. ಗೋವಾ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಕೋಝಿಕ್ಕೋಡ್ ಜಿಲ್ಲೆಗೆ ಹಾಗೂ ಇತರೆರಡೆಗಳಿಗೆ ಮಾದಕ ವಸ್ತುಗಳು ತಲುಪುತ್ತವೆ. ಈ ಬಗ್ಗೆ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯಾಚರಣೆ ಪಡೆಗೆ ಗುಪ್ತಚರ ಮಾಹಿತಿ ಲಭಿಸಿದೆ.
ಶುಕ್ರವಾರ ಪನ್ನಿಯಂಗರದ ಇಬ್ಬರು ಯುವಕರನ್ನು ಪೋಲೀಸರು ಹಿಡಿದಿದ್ದರು. ಈ ಜನರು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಮ್ಮೆ ಬಳಸಿದ ವ್ಯಸನಕಾರಿಯಾದ ವ್ಯಕ್ತಿಗಳಿಗೆ ರಾಸಾಯನಿಕ ಔಷಧಗಳನ್ನು ಈ ಗುಂಪು ಮಾರಾಟ ಮಾಡುತ್ತದೆ. ಇವು ಜೀವಕೋಶಗಳನ್ನು ನಾಶಪಡಿಸುವ ಸಾಮಥ್ರ್ಯವನ್ನು ಹೊಂದಿವೆ ಎಂದು ವರದಿಯಾಗಿದೆ. ಇದೇ ವೇಳೆ, ಅವರು ವಿಭಿನ್ನ ಹೆಸರುಗಳಲ್ಲಿ ಗುರುತಿಸಲಾಗದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸೂಚಿಸಲಾಗುತ್ತದೆ.
ಹುಡುಗಿಯರನ್ನು ಗುರಿಯಾಗಿಸಿಕೊಂಡು ಸಣ್ಣ ವಿತರಕರ ಮೂಲಕ ಈ ಗ್ಯಾಂಗ್ ಡ್ರಗ್ಸ್ ವಿತರಿಸುತ್ತದೆ. ಅವು ನೀರಿನೊಂದಿಗೆ ಬೆರೆಸಿ ಕುಡಿಯಲು ಲಭ್ಯವಿದೆ. ಬೆಂಕಿಹಚ್ಚಿ ಅಥವಾ ನೇರವಾಗಿ ಸೇವಿಸುವವರೂ ಇದ್ದಾರೆ. ಈ ಅಮಲು 12 ಗಂಟೆಯಿಂದ 24 ಗಂಟೆಗಳವರೆಗೆ ಇರುತ್ತದೆ. ಜಿಲ್ಲೆಗೆ ಎಂಡಿಎಂಎ ಆಗಮನವಾಗಿದ್ದು ಮಾರುಕಟ್ಟೆಯನ್ನು ಸಕ್ರಿಯಗೊಳಿಸಿದೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ.