ತಿರುವನಂತಪುರ: ಐಟಿಐ ಕಾಲೇಜಲ್ಲಿ ಕ್ಯಾಂಪಸ್‍ನೊಳಗೆ ವಿದ್ಯಾರ್ಥಿಗಳು ಶಸ್ತ್ರಾಸ್ತ್ರಗಳನ್ನು ತಯಾರಿಸಿತ್ತಿರುವುದು ಬಹಿರಂಗಗೊಂಡಿದೆ. ತಿರುವನಂತಪುರ ಜಿಲ್ಲೆಯ ನೆಯ್ಯಾಟಿಂಗÀರ ಧನುವಾಚಪುರಂ ಐಟಿಐನಲ್ಲಿ ವಿದ್ಯಾರ್ಥಿಗಳು ಅಧ್ಯಯನ ಕೊಠಡಿಯನ್ನು ಶಸ್ತ್ರಾಸ್ತ್ರಗಳ ಅಂಗಡಿಯನ್ನಾಗಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ದೃಶ್ಯ ಮಾಧ್ಯಮಗಳು ತೆಗೆದುಕೊಂಡಿದೆ.
ಕಾಲೇಜಿನೊಳಗಿನ ಪ್ರಾಯೋಗಿಕ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದಾರೆ. ಲ್ಯಾಬ್ ಅನ್ನು ಆಯುಧ ಕಾರ್ಖಾನೆಯಾಗಿ ಪರಿವರ್ತಿಸಲಾಗುತ್ತಿದೆ ಎಂದು ಎಡ ಸಹಾಯಕ ಶಿಕ್ಷಕರು ಪತ್ತೆಹಚ್ಚಿದರು. ಆದರೆ ಇದನ್ನು ಬಹಿರಂಗಪಡಿಸದೆ ಮರೆಮಾಚಲಾಗಿದೆ. ಕ್ಯಾಂಪಸ್‍ನಲ್ಲಿ ಆಯುಧಗಳನ್ನು ತಯಾರಿಸುತ್ತಿರುವುದು ಎಸ್ ಎಫ್ ಐಗೂ ತಿಳಿದಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಿಕ್ಷಕರು ಮೌನವಾಗಿದ್ದಾರೆ.
ಪಾಲ್ ರಾಜ್ ಎಂಬ ಎಡಪಂಥೀಯ ಶಿಕ್ಷಕ ಕ್ಯಾಂಪಸ್‍ನಿಂದ ಅನೇಕ ಕತ್ತಿಗಳನ್ನು ವಶಪಡಿಸಿಕೊಂಡರು. ಆದರೆ ಅವರು ಇದನ್ನು ಮೊದಲ ಮರೆಮಾಡಿದರು. ಕ್ಯಾಂಪಸ್ ಒಳಗೆ ತಯಾರಾದ ಆಯುಧಗಳು ಕ್ಯಾಂಪಸ್ ಒಳಗೆ ಮತ್ತು ಹೊರಗೆ ಕೊಲೆಗಡುಕ ರಾಜಕೀಯದ ಅಸ್ತ್ರಗಳಾಗುತ್ತಿವೆ.
ಈ ಹಿಂದೆಯೂ ಇದೇ ರೀತಿ ಯೂನಿವರ್ಸಿಟಿ ಕಾಲೇಜಿನಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.