ಕುಂಬಳೆ: ರಾಜ್ಯ ಸಭೆಗೆ ನಾಮ ನಿರ್ದೇಶಿತರಾದ ಧರ್ಮದರ್ಶಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ಸಮಿತಿ ಪದಾಧಿಕಾರಿಗಳು ಸೋಮವಾರ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಭಜನಾ ಸಮಿತಿಯ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಶಾಲು ಹಾಕಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಹೂಗುಚ್ಛ ನೀಡಿ ಗೌರವಿಸಿದರು. ಭಜನಾ ಪರಿಷತ್ ಸಂಚಾಲಕಿ ಮೀರಾ ಗಟ್ಟಿ ಉಳಿಯ, ರೋಹಿತಾಕ್ಷ ಮಧೂರು,ನೇತ್ರಾವತಿ ಯೋಗಿಶ್ ಆಚಾರ್ಯ, ಮಲ್ಲೇಶ್ ಮಾಯಿಪ್ಪಾಡಿ ಮೊದಲಾದವರು ಈ ಸಂದರ್ಭದಲ್ಲಿ ಜತೆಗಿದ್ದರು.