ಪೆರ್ಲ: ಆರ್ಥಿಕ ಸ್ವಾವಲಂಬನೆಗೆ ಸಹಾಯಕವಾಗಿ ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಮೊಟ್ಟೆ ಕೋಳಿ ವಿತರಿಸಲಾಯಿತು.ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಮೊಟ್ಟೆ ಕೋಳಿ ವಿತರಣೆಯನ್ನು ಉದ್ಘಾಟಿಸಿದರು. ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ.ಸದಸ್ಯೆಯರಾಧ ಕುಸುಮಾವತಿ,ಉಷಾ,ಎಡಿಎಂಸಿ ಇಕ್ಬಾಲ್, ಸಿಡಿಎಸ್ ಮೆಂಬರ್ ಸೆಕ್ರಟರಿ ಬಿನೀಶ್,ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ,ಸಿಡಿಎಸ್ ಸದಸ್ಯೆಯರು ಪಾಲ್ಗೊಂಡಿದ್ದರು.