ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆಯಲ್ಲಿ ರಾಮಾಯಣ ಮಹಾಸಾಚರಣೆಯ ಉದ್ಘಾಟನೆ ಜರಗಿತು. ಶಾಲಾ ವ್ಯವಸ್ಥಾಪಕ ಬಳ್ಳಪದವು ನಾರಾಯಣ ಶರ್ಮ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಬ್ರಹ್ಮ ಘನಪಾಠಿ ಕುವೆಕಲ್ಲು ವೆಂಕಟೇಶ್ವರ ಪ್ರಸಾದ ಮೊದಲ ದಿನದ ಪ್ರವಚನವನ್ನು ನಡೆಸಿ ಕೊಟ್ಟರು. ಹಿರಿಯ ಅಧ್ಯಾಪಕ ರಾಜಶೇಖರ ಪಿ. ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ರಾಧಾಮಾಧವ ನಿರೂಪಿಸಿದರು. ಮುಂದಿನ ಒಂದು ತಿಂಗಳುಗಳ ಕಾಲ ರಾಮಾಯಣ ಪ್ರವಚನ ನಡೆಯಲಿದೆ.
ಅಗಲ್ಪಾಡಿ ಶಾಲೆಯಲ್ಲಿ ರಾಮಾಯಣ ಮಹಾಸಾಚರಣೆ
0
ಜುಲೈ 30, 2022